ಉಡುಪಿ: ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನಾಭರಣ ಕಳವಾದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲ ವಿದ್ಯಾರತ್ನ ನಗರದ ಪ್ರಸನ್ನ ಪದ್ಮರಾಜ್ ಅವರು ಕೋ ಆಪರೇಟಿವ್ ಬ್ಯಾಂಕ್‌ನಿಂದ 4 ಲ.ರೂ. ಹಣವನ್ನು ಡ್ರಾ ಮಾಡಿ ಆ ಪೈಕಿ 50 ಸಾವಿರ ರೂ.ಗಳನ್ನು ಬೆಡ್ ರೂಂನ ವಾರ್ಡ್ ರೂಬ್‌ನಲ್ಲಿಟ್ಟು ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಿನಿಂದ ವಾಪಸ್ ಬಂದು ವಾರ್ಡ್ ರೂಬ್ ತೆಗೆದು ನೋಡಿದಾಗ ಆ ಹಣ ಇರಲಿಲ್ಲ. ಇದರಿಂದ ಅನುಮಾನಗೊಂಡ ಅವರು ಲಾಕರ್ ಪರಿಶೀಲನೆ ಮಾಡಿದಾಗ ಕಳೆದ ವರ್ಷ ಅ. 15ರಂದು ರಾತ್ರಿ ಲಾಕರ್‌ನಲ್ಲಿಟ್ಟಿದ್ದ 4 ಲ.ರೂ. ಮೌಲ್ಯದ ವಿವಿಧ ನಮೂನೆಯ 8 ಬಂಗಾರದ ಬಳೆಗಳು ಹಾಗೂ ಒಂದು ಡೈಮಂಡ್ ಉಂಗುರ ಕಳವಾಗಿರುವುದು ಕಂಡು ಬಂತು. ಈ ಆಭರಣ ಮತ್ತು ನಗದು ಹಣವನ್ನು ಮನೆ ಕೆಲಸದ ಮಹಿಳೆ ಕಳವು ಮಾಡಿರುವ ಅನುಮಾನ ಇರುವುದಾಗಿ ಅವರು ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
18/02/2022 01:14 pm