ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾವಂಜೆ: ಭಾವನ ಅಗಲಿಕೆ ನೋವು; ನದಿಗೆ ಹಾರಿ ದಾವಣಗೆರೆಯ ಇಂಜಿನಿಯರ್ ಆತ್ಮಹತ್ಯೆ!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಸೇತುವೆ ಮೇಲಿನಿಂದ ನಂದಿನಿ ನದಿಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ದಾವಣಗೆರೆ ನಿವಾಸಿ ಸುಚೇಂದ್ರ ಕುಮಾರ್(35) ಮೃತಪಟ್ಟವರು.

ಬೆಳಗ್ಗೆ 11 ಗಂಟೆ ಸುಮಾರಿಗೆ ನಂದಿನಿ ನದಿಯಲ್ಲಿ ಶವ ಪತ್ತೆಯಾಗುತ್ತಿದ್ದಂತೆಯೇ ಸ್ಥಳಕ್ಕೆ ಮುಲ್ಕಿ ಪೊಲೀಸರು ಹಾಗೂ ಸಮಾಜಸೇವಕ ಆಸಿಫ್ ಆಪದ್ಬಾಂಧವ ಕಾರ್ಯಾಚರಣೆ ನಡೆಸಿ ದೋಣಿ ಮುಖಾಂತರ ಶವ ಮೇಲಕ್ಕೆತ್ತಿದರು.

ಸುಚೇಂದ್ರ ಇಂಜಿನಿಯರ್ ಆಗಿದ್ದು, ಕೆಲ ದಿನಗಳ ಹಿಂದೆ ತನ್ನ ತಂಗಿಯ ಗಂಡ ಅಪಘಾತದಲ್ಲಿ ಮೃತರಾಗಿದ್ದು ಇದರಿಂದಾಗಿ ಮಾನಸಿಕವಾಗಿ ನೊಂದಿದ್ದರು. ದಾವಣಗೆರೆಯಲ್ಲೇ ಇದ್ದರೆ ಇನ್ನಷ್ಟು ಸಮಸ್ಯೆ ಆಗಬಹುದು ಎಂದು ಮನೆಯವರು ಬೇರೆ ಕಡೆಗೆ ಕಳುಹಿಸಿದರೆ ಹಳೆ ನೆನಪನ್ನು ಮರೆಯಬಹುದು ಎಂಬ ಕಾರಣದಿಂದ 6 ತಿಂಗಳ ಹಿಂದೆ ಪತ್ನಿಯ ಮನೆ ಹಳೆಯಂಗಡಿ ಸಮೀಪದ ಚೇಳಾರಿಗೆ ಕಳುಹಿಸಿದ್ದಾರೆ.

ಆದರೆ, ಈ ಆಘಾತದಿಂದ ಹೊರಬಾರದ ಸುಚೇಂದ್ರ ಯಾರೊಂದಿಗೂ ಹೆಚ್ಚು ಬೆರೆಯದೆ, ಮಾತನಾಡದೆ ಇರುತ್ತಿದ್ದು ಬುಧವಾರ ಬೆಳಿಗ್ಗೆ 10ರ ವರೆಗೆ ಮನೆಯಲ್ಲೇ ಇದ್ದು ನಂತರ ಪಾವಂಜೆಯ ನಂದಿನಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

16/02/2022 04:16 pm

Cinque Terre

8.89 K

Cinque Terre

0

ಸಂಬಂಧಿತ ಸುದ್ದಿ