ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಡಿದುರುಳಿಸಿದ ಮರ ತೆರವಿಗೆ ಮೀನಮೇಷ; ಆಕ್ರೋಶ

ಮುಲ್ಕಿ: ಮುಲ್ಕಿ ವಿಜಯ ಸನ್ನಿಧಿ ಕಟ್ಟಡದ ಎದುರು ಭಾಗದಲ್ಲಿ ಕಳೆದ ಒಂದು ವಾರದಿಂದ ಭಾರಿ ಗಾತ್ರದ ಮರವೊಂದು ಕಡಿದುರುಳಿಸಿದ್ದು ರಸ್ತೆ ಬದಿಯಲ್ಲಿ ಹರಡಿರುವ ಮರದ ತುಂಡುಗಳ ಅವಶೇಷಗಳಿಂದ ಸ್ಥಳೀಯರಿಗೆ, ಸೊಸೈಟಿಗೆ, ಬ್ಯಾಂಕ್ ಗೆ ಬರುವ ಗ್ರಾಹಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ನಡೆದಾಡಲು ತೀವ್ರ ತೊಂದರೆಯಾಗಿದೆ.

ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರಿಗೆ ನೆರಳಿನ ಆಶ್ರಯ ನೀಡುತ್ತಿದ್ದ ಭಾರಿ ಗಾತ್ರದ ಮರವನ್ನು ಕಡಿದು ಹಾಕಿರುವ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ದೂರು ನೀಡಿ ಅಧಿಕಾರಿಗಳು ತನಿಖೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇದೀಗ ಕಡಿದ ಮರಗಳನ್ನು ರಸ್ತೆ ಬದಿಯಲ್ಲಿ ತೆರವುಗೊಳಿಸದೆ ಜನ ಸಂಚಾರಕ್ಕೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಮರದ ಹರಿತವಾದ ಅಲಗು ಪಾದಚಾರಿಗಳಿಗೆ ತಾಗಿ ಕೆಲವರು ಗಾಯಗೊಂಡಿದ್ದಾರೆ.

ಕೂಡಲೇ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಈ ಬಗ್ಗೆ ಗಮನಹರಿಸಿ ಕಡಿದುರುಳಿಸಿದ ಮರವನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

03/02/2022 01:08 pm

Cinque Terre

16.8 K

Cinque Terre

1

ಸಂಬಂಧಿತ ಸುದ್ದಿ