ಕಡಬ: ಕಡಬ- ಸುಬ್ರಹ್ಮಣ್ಯ ನಡುವೆ ಬರುವ ಮರ್ದಾಳ ಸಮೀಪದ ನೆಕ್ಕಿತ್ತಡ್ಕ ದರ್ಗಾದ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಸಾವಿರಾರು ರೂ. ದೋಚಿದ್ದಾರೆ.
ಮುಂಜಾವ 3 ಗಂಟೆಯ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ದರ್ಗಾದ ಬೀಗವನ್ನು ಮುರಿದು ಒಳನುಗ್ಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದರ್ಗಾದ ಕಬ್ಬಿಣದ ಬಾಗಿಲಿಗೆ 2 ಬೀಗಗಳನ್ನು ಹಾಕಲಾಗಿದ್ದು, ಇದರಲ್ಲಿ ಒಂದು ಬೀಗವನ್ನು ಮುರಿದಿರುವ ಕಳ್ಳರು, ಎರಡನೇ ಬೀಗವನ್ನು ಮುರಿಯಲಾಗದೆ ಬಾಗಿಲಿನ ಚಿಲಕವನ್ನೇ ಪುಡಿಗಟ್ಟಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ದರ್ಗಾದಲ್ಲಿದ್ದ 30 ಸಾವಿರಕ್ಕೂ ಹೆಚ್ಚಿನ ಹಣವನ್ನು ಕಳ್ಳರು ಎಗರಿಸಿದ್ದಾರೆ.
PublicNext
31/01/2022 08:58 pm