ಉಡುಪಿ: ಏಣಿ ಮೂಲಕ ಕಾಳು ಮೆಣಸು ಕೊಯ್ಯುವಾಗ ಕೃಷಿಕರೊಬ್ಬರು ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಸಂತೆಕಟ್ಟೆಯ ಗೋಪಾಲಪುರ ಎಂಬಲ್ಲಿ ನಡೆದಿದೆ.
ಮೃತರನ್ನು ಗೋಪಾಲಪುರ ನಿವಾಸಿ ಸ್ಟಾನಿ ರೆಬೆಲ್ಲೋ (71) ಎಂದು ಗುರುತಿಸಲಾಗಿದೆ. ಇವರು ತೋಟದಲ್ಲಿ ಅಡಿಕೆ ಮರಕ್ಕೆ ಹಬ್ಬಿದ ಕಾಳು ಮೆಣಸನ್ನು ಏಣಿಯ ಮೂಲಕ ಕೊಯ್ಯುತ್ತಿದ್ದರು. ಆಗ ಆಕಸ್ಮಿಕವಾಗಿ ಕಾಲು ಜಾರಿ ಏಣಿಯಿಂದ ಕೆಳಗೆ ಬಿದ್ದ ಇವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
31/01/2022 06:07 pm