ಕಾರ್ಕಳ: ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಜ್ಯೋತಿ ಹೈಸ್ಕೂಲ್ ಸಮೀಪ ನಡೆದಿದೆ.
ಬಾಗಲಕೋಟೆ ಮೂಲದ ಮೃತ್ಯುಂಜಯ (28) ಆತ್ಮಹತ್ಯೆ ಮಾಡಿಕೊಂಡಾತ.
ಮೃತ ಮೃತ್ಯುಂಜಯ ,ಅಜೆಕಾರಿನ ಕೃಷಿ ಯಂತ್ರ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಬಾಡಿಗೆ ಮನೆಯಲ್ಲಿ ಒಬ್ಬನೆ ವಾಸವಾಗಿದ್ದ. ಮೃತನು ಮೂಲತಃ ಬಾಗಲಕೊಟೆ ಜಿಲ್ಲೆಯವನಾಗಿದ್ದು, ತಂದೆ ಉಡುಪಿ ಜಿಲ್ಲೆಯಲ್ಲಿ ಪಿ.ಡಿ.ಓ ಆಗಿ ಕೆಲಸ ಮಾಡಿ ಬಳಿಕ ನಿವೃತ್ತರಾಗಿದ್ದರು. ಬೈಕ್ ನ ವ್ಯಾಮೋಹ ಹೊಂದಿದ್ದ ಕಾರಣ ಸುಮಾರು 8 ತಿಂಗಳ ಹಿಂದೆ X Pulse ಎಂಬ ಬೈಕ್ಅನ್ನು ಲೋನ್ ಮೂಲಕ ತೆಗೆದುಕೊಂಡಿದ್ದ. 1 ತಿಂಗಳ ಹಿಂದೆ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟ ಕಾರಣ ಬೈಕ್ ಲೋನ್ ಕಟ್ಟಲು ಕಷ್ಟವಾಗಿ 10 ದಿನದ ಹಿಂದೆ ಬೈಕ್ಅನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ.
ಜನವರಿ 28 ರಂದು ತನ್ನ ವಾಟ್ಸಾಪ್ ಮೂಲಕ ತನ್ನ ಗೆಳೆಯನಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ, ಗೆಳೆಯ ಮೆಸೇಜ್ ನೋಡಿ ಮೃತ್ಯುಂಜಯನಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದೇ ಇದ್ದಾಗ ಸ್ಥಳಕ್ಕೆ ಹೋಗಿ ನೋಡಿದಾಗ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Kshetra Samachara
28/01/2022 03:25 pm