ಕಾರ್ಕಳ: ಮಹಿಳೆಯೊಬ್ಬರು ಕೊರೊನಾ ಭೀತಿಯಿಂದ ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರ್ಗಾನ ಗ್ರಾಮದ ಹೊಸ್ಮಾರು ಎಂಬಲ್ಲಿ ನಡೆದಿದೆ.
ಮೃತರನ್ನು ಹೊಸ್ಮಾರು ನಿವಾಸಿ ಲಕ್ಷ್ಮೀ (65) ಎಂದು ಗುರುತಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಈ ಮಹಿಳೆ, ಕೊರೊನಾ ಪಾಸಿಟಿವ್ ಅಲ್ಲದಿದ್ದರೂ ಕೊರೊನಾ ಭೀತಿಯಲ್ಲಿ ಪತ್ರ ಬರೆದಿಟ್ಟು, ಮನೆಯ ಹಿಂಬದಿಯಲ್ಲಿ ಮೈಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/01/2022 06:22 pm