ಮಂಗಳೂರು: ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ ಎಂದು ಮಹಿಳೆಯೋರ್ವರು ಪತಿ, ಅತ್ತೆ-ಮಾವ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರುದಾರೆ ಮಹಿಳೆ ಆಶ್ರಿನಾರಿಗೆ ನಗರದ ಕೃಷ್ಣಾಪುರ ಕಾಟಿಪಳ್ಳ 9ನೇ ಬ್ಲಾಕ್ ನಿವಾಸಿ ಅಬ್ದುಲ್ ಖಾದರ್ ನೊಂದಿಗೆ 7 ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರಿಗೆ ಮೂವರು ಪುತ್ರಿಯರಿದ್ದಾರೆ.
ಮದುವೆಯ ಸಂದರ್ಭ 50 ಪವನ್ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಈ ಒಡವೆಗಳನ್ನು ಪತಿ ಅಬ್ದುಲ್ ಖಾದರ್ ಬಸ್ ಖರೀದಿಗೆಂದು ಬ್ಯಾಂಕ್ ನಲ್ಲಿ ಅಡವಿಟ್ಟು ಸಾಲ ಪಡೆದಿದ್ದ. ಬಳಿಕ ಸಾಲದ ಬಡ್ಡಿ ಕಟ್ಟಲೆಂದು ಹಣ ತಂದು ಕೊಡುವಂತೆ ಪೀಡಿಸಲಾರಂಭಿಸಿದ್ದಾನೆ. ಇದಕ್ಕಾಗಿ ಅಣ್ಣನಿಂದ ಹಾಗೂ ಮಾವನಿಂದ ಪಡೆದು ಹಣ ತಂದು ಕೊಟ್ಟರೂ ಕಿರುಕುಳ ಮಾತ್ರ ನಿಲ್ಲಲಿಲ್ಲ. ವರದಕ್ಷಿಣೆ ಕಿರುಕುಳ ನೀಡುತ್ತಿರುವುದಕ್ಕೆ 7 - 8 ಬಾರಿ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯತಿಗೆ ಮಾಡಲಾಗಿದೆ. ಇದಲ್ಲದೆ ಪತಿ ಅಬ್ದುಲ್ ಖಾದರ್ ಬಸ್ ನಲ್ಲಿ ಬರುವ ಯುವತಿಯರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ಬಸ್ಸಿನಲ್ಲಿ ಸಂಪಾದಿಸಿರುವುದನ್ನು ಅವರಿಗೆ ಖರ್ಚು ಮಾಡುತ್ತಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿದರೆ ಮಕ್ಕಳ ಮುಂದೆಯೇ ಚಿತ್ರಹಿಂಸೆ ನೀಡುತ್ತಿದ್ದಾನೆ. ಇದೀಗ ಮತ್ತೆ ಜ.4 ರಂದು ಮಾವ, ಅತ್ತೆ ಹಾಗೂ ಪತಿ ಮಾನಸಿಕ ಹಿಂಸೆ ನೀಡಿ ಮತ್ತಷ್ಟು ಹಣ ತಂದು ಕೊಡುವಂತೆ ಒತ್ತಾಯಿಸಿ ಮನಬಂದಂತೆ ಹಲ್ಲೆ ನಡೆಸಿ ನನ್ನ ಬಟ್ಟೆಗಳನ್ನೆಲ್ಲ ಹರಿದು ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣಾ ಪೊಲೀಸರು ಆಶ್ರಿನಾ ಪತಿ ಅಶೀಲ್ ಟ್ರಾವೆಲ್ಸ್ ಮಾಲಕ ಅಬ್ದುಲ್ ಖಾದರ್, ಅತ್ತೆ - ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಈ ಮೂವರೂ ತಲೆಮರೆಸಿಕೊಂಡಿದ್ದಾರೆ.
Kshetra Samachara
17/01/2022 04:48 pm