ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಪ್ಪನಾಡು: ಶಾಂಭವಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಅಧಿಕಾರಿಗಳ ದಾಳಿ ; ಮರಳು ವಶ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಜಲಕದ ಕಟ್ಟೆ ಬಳಿ ಅಕ್ರಮ ಮರಳುಗಾರಿಕೆ ಚಟುವಟಿಕೆಗಳನ್ನು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯೊಂದಿಗೆ ಪ್ರಾದೇಶಿಕ ನಿರ್ದೇಶಕರ (ಪರಿಸರ) ಕಛೇರಿಯ ಅಧಿಕಾರಿಗಳು ಕಂದಾಯ ಇಲಾಖೆಯ ಗ್ರಾಮ ಕರಣಿಕರೊಂದಿಗೆ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರವರ ಆದೇಶದಂತೆ ಗ್ರಾಮದ ಸ.ನಂ.96 ರಲ್ಲಿ ಪರಿಶೀಲನೆ ಮಾಡಿ ಬಪ್ಪನಾಡು ಜಳಕದ ಕಟ್ಟೆ ಎಂಬಲ್ಲಿ ಶಾಂಭವಿ ನದಿ ದಡದಲ್ಲಿ 2 ಮೆಟ್ರಿಕ್ ಟನ್ ಗಳಷ್ಟು ಮರಳು ಕಂಡು ಬಂದಿದ್ದು ಅದನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಆರ್ ಪದ್ಮಶ್ರೀಯವರು ಮಹಜರು ಮುಖೇನ ಸ್ಥಳದಿಂದ ಸ್ವಾಧೀನಪಡಿಸಿಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮುಕ್ಕ ತನಿಖಾ ಠಾಣೆಗೆ ಸಾಗಾಣಿಕೆ ಮಾಡಿ ಶೇಖರಿಸಿಕೊಂಡಿರುತ್ತಾರೆ.

ಯಾರೋ ಕಳ್ಳರು ಸರಕಾರಿ ಸೊತ್ತಾದ ಮರಳನ್ನು ಶಾಂಭವಿ ನದಿಯಿಂದ ತೆಗೆದು ಕಳ್ಳತನ ಮಾಡಿರುವ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

12/01/2022 10:42 pm

Cinque Terre

7.87 K

Cinque Terre

0

ಸಂಬಂಧಿತ ಸುದ್ದಿ