ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಾಲ ತೀರಿಸಲಾಗದೆ ಕಚೇರಿಯಲ್ಲೇ ಯುವಕ ನೇಣಿಗೆ ಶರಣು

ಮಂಗಳೂರು: ಪಡೆದುಕೊಂಡಿದ್ದ ಸಾಲವನ್ನು ತೀರಿಸಲಾಗದೆ ಯುವಕನೋರ್ವ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿಯಲ್ಲಿ ನಡೆದಿದೆ.

ಕಿನ್ನಿಗೋಳಿ ಪಕ್ಷಿಕೆರೆ ನಿವಾಸಿ ಸುಶಾಂತ್(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸುಶಾಂತ್ ಹೆತ್ತವರು 15 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು‌. ತಮ್ಮ ಅಣ್ಣ ಅಶ್ವಿತ್ (31) ರೊಂದಿಗೆ ವಾಸಿಸುತ್ತಿದ್ದರು.

ಇದೀಗ ಸುಶಾಂತ್ ತಾವು ತೆಗೆದುಕೊಂಡ ಸಾಲವನ್ನು ತೀರಿಸಲಾಗದೆ ಕುಳಾಯಿಯ ತನ್ನ ಸನ್ ರೈಸ್ ಕಾರ್ಪೊರೇಷನ್ ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಚೇರಿ ಬಾಗಿಲನ್ನು ಒಡೆದು ಒಳಹೋಗಿದ್ದಾರೆ. ಅಲ್ಲಿ ಸುಶಾಂತ್ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್ ನಲ್ಲಿ 'ಕ್ಷಮಿಸಿ ನನಗೆ ಎಲ್ಲರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಣದ ವಿಚಾರದಲ್ಲಿ ತೊಂದರೆಯಾಗಿದೆ. ಆನ್ ಲೈನ್ ನಲ್ಲಿ ಸಾಲ ನೀಡಿದವರು ಕರೆ ಮಾಡಿದರೆ ಮೃತಪಟ್ಟಿದ್ದೇನೆಂದು ಹೇಳಿ' ಎಂದು ಬರೆದಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

10/01/2022 06:21 pm

Cinque Terre

22.45 K

Cinque Terre

0

ಸಂಬಂಧಿತ ಸುದ್ದಿ