ಕಾರ್ಕಳ: ಕಾರ್ಕಳದಲ್ಲಿ ಮತ್ತೆ ಗೋಕಳ್ಳರು ಅಟ್ಟಹಾಸ ಮೆರೆದಿದ್ದಾರೆ.ಇಲ್ಲಿನ ಕರಿಯಕಲ್ಲು ಕಜೆ ಎಂಬಲ್ಲಿನ ಎರಡು ಮನೆಗಳಿಂದ ಗೋವುಗಳನ್ನು ಕಳವು ಮಾಡಲಾಗಿದೆ..ಯಶೋಧಾ ಆಚಾರ್ಯ ಮತ್ತು ಸುಧಾಕರ ಶೆಟ್ಟಿ ಎಂಬವರ ಮನೆಯಿಂದ ಗೋ ಕಳ್ಳತನ ಮಾಡಲಾಗಿದೆ.ಕಳೆದ ಒಂದು ವರ್ಷದ ಅವಧಿಯಲ್ಲಿ ಒಂದು ಮನೆಯಿಂದ 16 ದನಗಳು ಮತ್ತೊಂದು ಮನೆಯಿಂದ 12 ಗೋವುಗಳನ್ನು ಕಳ್ಳರು ಕಳ್ಳತನಗೈದಿದ್ದು ಮನೆಯವರು ತಮ್ಮ ಗೋಳು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆಯ ಮುಖಂಡರು ಬೇಟಿ ನೀಡಿದ್ದು, ಪ್ರಕರಣದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯ ಮಾಡಿದ್ದಾರೆ.
Kshetra Samachara
08/01/2022 01:08 pm