ಮಂಗಳೂರು: ಐಸಿಸ್ ಜೊತೆ ನಂಟಿನ ಆರೋಪ ಹಿನ್ನೆಲೆಯಲ್ಲಿ ನಗರ ಬಳಿಯ ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಪುತ್ರ ಬಿ.ಎಂ.ಬಾಷಾ ಅವರ ಸೊಸೆ ದೀಪ್ತಿ ಆಲಿಯಾಸ್ ಮರಿಯಂಳನ್ನು ಎನ್ಐಎ ವಶಕ್ಕೆ ಪಡೆದಿದೆ.
ಉಳ್ಳಾಲ ಮಾಸ್ತಿಕಟ್ಟೆಯ ಮನೆಯಲ್ಲಿ ವಶಕ್ಕೆ ಪಡೆದ ಎನ್ಐಎ, ಟೆಂಪೋ ಟ್ರಾವೆಲರ್ ನಲ್ಲಿ ಕರೆದುಕೊಂಡು ಹೋಗಿ, ವೆನ್ ಲಾಕ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಎನ್ ಐಎ ತಂಡ ಆಕೆಯನ್ನು ನೇರವಾಗಿ ದೆಹಲಿಗೆ ಕರೆದುಕೊಂಡು ಹೋಗಲಿದೆ.
ಇದೇ ಮನೆಗೆ ಆಗಸ್ಟ್ 4ರಂದು ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಅಂದು ಎರಡು ದಿನಗಳ ದಾಳಿ ಬಳಿಕ ಬಾಷಾ ಕಿರಿಯ ಪುತ್ರ ಅಬ್ದುಲ್ ರೆಹಮಾನ್ ನನ್ನು ಬಂಧಿಸಲಾಗಿತ್ತು. ಈ ವೇಳೆ ಬಾಷಾ ಮತ್ತೊಬ್ಬ ಪುತ್ರ ಅನಾಸ್ ಪತ್ನಿ ದೀಪ್ತಿ ಆಲಿಯಾಸ್ ಮರಿಯಂ ಮೇಲೆ ಅನುಮಾನ ಬಂದಿತ್ತು. ಆದರೆ, ಸಣ್ಣ ಮಗುವಿದ್ದ ಕಾರಣ ಎನ್ ಐಎ ಕೇವಲ ವಿಚಾರಣೆ ನಡೆಸಿ ಬಿಟ್ಟಿತ್ತು.
ಇದೀಗ ಮತ್ತೆ ಮನೆಗೆ ಎನ್ಐಎ ದಾಳಿ ನಡೆಸಿ, ಮರಿಯಂಳನ್ನು ವಶಕ್ಕೆ ಪಡೆದಿದೆ.
PublicNext
03/01/2022 05:34 pm