ಕೋಟ: ಕೋಟ ಠಾಣೆ ಪೊಲೀಸರಿಂದ ಕೊರಗ ಜನಾಂಗದ ಮೇಲೆ ನಡೆದ ದೌರ್ಜನ್ಯ ಪ್ರಕರಣದ ಕಿಚ್ಚು ಇನ್ನೂ ಆರಿಲ್ಲ.ಇವತ್ತು ಕೋಟದ ದೌರ್ಜನ್ಯಕ್ಕೊಳಗಾದ ಕುಟುಂಬದ ಅಹವಾಲು ಕೇಳಿದ ಗೃಹ ಸಚಿವರು ಕೋಟ ಪೊಲೀಸರ ವಿರುದ್ಧವೇ ಕಿಡಿ ಕಾರಿದ್ದಾರೆ.
ಪೊಲೀಸ್ ದೌರ್ಜನ್ಯದ ವಿರುದ್ಧ ಜನಾಕ್ರೋಶದ ಹಿನ್ನೆಲೆಯಲ್ಲಿ ಕೊರಗರ ಮನೆಗೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೆಂದ್ರ,
ಎರಡು ದಿನ ಸುಮ್ಮನಿದ್ದ ಪೊಲೀಸ್ ಕಾನ್ಸ್ಟೇಬಲ್ ಮೂರನೇ ದಿನ ಕೇಸು ಮಾಡಿದ್ದಾನೆ.ಸರ್ಕಾರಿ ನೌಕರಿಗೆ ಅಡ್ಡಿ ಎಂದು ಪ್ರತಿ ದೂರು ನೀಡಿದ್ದಾನೆ.ಎಲ್ಲರಿಗೂ ಗೊತ್ತಾಗುತ್ತೆ ಇದೊಂದು ಸುಳ್ಳು ಕೇಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ!
ಈ ರೀತಿ ಒಬ್ಬ ಪೋಲೀಸ್ ಸುಳ್ಳು ಕೇಸು ಕೊಡಬಾರದು,ಇದು ಬಹಳ ದೊಡ್ಡ ಅಪರಾಧ.ಸಾಮಾನ್ಯ ಜನ ಇದನ್ನೆಲ್ಲ ಮಾಡ್ತಾರೆ ನಿಜ.
ಆದರೆ ನಮ್ಮ ಒಬ್ಬ ಪೊಲೀಸ್ ಈ ಕೆಲಸ ಮಾಡಬಾರದಿತ್ತು.ಕೋಟ ಎಸ್ಐ ಮೇಲಧಿಕಾರಿಗಳಿಗೆ ಮಾಹಿತಿ ನೀಡಿಲ್ಲ.ಅತ ಒಬ್ಬ ದಾಷ್ಟ್ಯದ ಮನುಷ್ಯ ಅನಿಸುತ್ತೆ ಎಂದು ಆಕ್ರೋಶಗೊಂಡರು.
ಪೊಲೀಸರು ಮನುಷ್ಯತ್ವವನ್ನೇ ಕಳೆದುಕೊಂಡು ಹಲ್ಲೆ ಮಾಡಿದ್ದಾರೆ ಎಂದ ಸಚಿವರು ರೌಡಿಗಳನ್ನು ಕಂಟ್ರೋಲ್ ಮಾಡಲು ಪೊಲೀಸ್ ನೇಮಕ ಮಾಡುತ್ತೇವೆ.ಪೊಲೀಸರೇ ರೌಡಿ ಕೆಲಸ ಮಾಡಿದರೆ ತಡೆಯೋರು ಯಾರು ಎಂದು ಹೇಳಿದ್ದಾರೆ.
ಗೃಹ ಸಚಿವರ ಖಡಕ್ ಮಾತಿನ ವಿಡಿಯೋ ಇಲ್ಲಿದೆ...
PublicNext
01/01/2022 04:58 pm