ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಕಾಂಡೋಮ್ ಹಾಕಿ ಧಾರ್ಮಿಕ ಕೇಂದ್ರ ಅಪವಿತ್ರಗೊಳಿಸಿದಾತನ ಕೈಕಾಲು ಕಡಿಯುತ್ತೇನೆ"

ಮಂಗಳೂರು: ಶ್ರೀ ಕೊರಗಜ್ಜನ ಕಟ್ಟೆ ಸೇರಿದಂತೆ 18 ಧಾರ್ಮಿಕ ಕೇಂದ್ರಗಳಿಗೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ದೇವದಾಸ್ ದೇಸಾಯಿ ಎಂಬಾತ ಮಾಡಿರುವ ಕುಕಾರ್ಯದಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಆದ್ದರಿಂದ ಆತನಿಗೆ ಜೈಲಿನಲ್ಲಿಯೇ ಕಠಿಣ ಶಿಕ್ಷೆಯಾಗಲಿ. ಇಲ್ಲದಿದ್ದಲ್ಲಿ ಆತ ಜೈಲಿನಿಂದ ಹೊರ ಬಂದ ತಕ್ಷಣ ನಾನೇ ಆತನ ಕೈಕಾಲು ಕಡಿಯುತ್ತೇನೆಂದು ಕ್ರಿಶ್ಚಿಯನ್ ವ್ಯಕ್ತಿಯೋರ್ವರು ಆಕ್ರೋಶಿತರಾಗಿ ನುಡಿದ ವೀಡಿಯೊ ವೈರಲ್ ಆಗಿದೆ.

ರೋಶನ್ ಡಿಸೋಜ ಎಂಬವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, 'ನ್ಯೂ ಲೈಫ್ ನವರು ಈ ರೀತಿಯ ಅವಾಂತರ ಮಾಡುತ್ತಿರುತ್ತಾರೆ. ಇಂಥವರಿಗೆ ಕಠಿಣ ಶಿಕ್ಷೆ ದೊರಕಲೇಬೇಕು. ನಾನು ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿದರೂ ಹಿಂದೂ, ಮುಸ್ಲಿಂ ಸಹಿತ ಎಲ್ಲಾ ಧರ್ಮವನ್ನು ಪ್ರೀತಿಸುತ್ತೇನೆ. ಕಾಂಡೋಮ್ ಮತ್ತಿತರ ವಸ್ತುಗಳನ್ನು ಧಾರ್ಮಿಕ ಕೇಂದ್ರಗಳಿಗೆ ಹಾಕುವಂತಹ ವಿಚಾರದಲ್ಲಿ ಕ್ಷಮೆ ಕೊಡಲು ಸಾಧ್ಯವೇ ಇಲ್ಲ. ಆದ್ದರಿಂದ ಇಂಥವರಿಗೆ ಗಲ್ಲಿಗೇರಿಸಿದರೂ ಕಡಿಮೆ ಶಿಕ್ಷೆಯೇ ಎಂದರು.

ಈತನ ಕುಕೃತ್ಯದಿಂದಾಗಿ ನಿಜವಾದ ಕ್ರೈಸ್ತರಿಗೆ ಬೇಸರ, ನೋವಾಗಿದೆ. ಇಂದು ದೇವದಾಸ್ ದೇಸಾಯಿ ಈ ರೀತಿಯ ಕೆಲಸ ಮಾಡುತ್ತಾನೆ‌. ನಾಳೆ ಮತ್ತೋರ್ವ ಇದೇ ಕೆಟ್ಟ ಕಾರ್ಯ ಮಾಡುತ್ತಾನೆ. ಆದ್ದರಿಂದ ಆತನಿಗೆ ಸಿಕ್ಕಿರುವ ಶಿಕ್ಷೆ ಇನ್ನೊಬ್ಬನಿಗೆ ಪಾಠವಾಗಬೇಕು. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರೋಶನ್ ಡಿಸೋಜ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

30/12/2021 10:38 pm

Cinque Terre

22.99 K

Cinque Terre

8

ಸಂಬಂಧಿತ ಸುದ್ದಿ