ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಖಾಸಗಿ ಬಸ್ ನಿರ್ವಾಹಕನ ಮೃತದೇಹ ಪತ್ತೆ

ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಮರದ ಅಡಿಯಲ್ಲಿ ವ್ಯಕ್ತಿಯೋರ್ವರ ಮೃತ ದೇಹ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಬಜಪೆ ಕಡಂಬಾರು ಕೊಪ್ಪಲ ನಿವಾಸಿ ಸಂತೋಷ್ (32)ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಕಿನ್ನಿಗೋಳಿಯ ಖಾಸಗಿ ಬಸ್‌ನಲ್ಲಿ ಬದಲಿ ನಿರ್ವಾಹಕನಾಗಿ ದುಡಿಯುತ್ತಿದ್ದು ಕಳೆದ ಒಂದು ವಾರದ ಹಿಂದೆ ಮನೆಯಿಂದ ಕಿನ್ನಿಗೋಳಿಗೆ ಬಂದಿದ್ದ ಎನ್ನಲಾಗಿದೆ.

ಈತನಿಗೆ ಮದ್ಯ ಹಾಗೂ ಅಮಲು ಪದಾರ್ಥ ಸೇವಿಸುವ ಚಟವಿತ್ತು ಕಳೆದ ಕೆಲ ತಿಂಗಳ ಹಿಂದೆ ಮನೆಯವರು ಶಿಬಿರಕ್ಕೆ ಸೇರಿಸಿ ಮದ್ಯ ಸೇವನೆ ಬಿಡಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರೂ ಫಲಕಾರಿಯಾಗದೆ ಮತ್ತೆ ಮದ್ಯ ಸೇವಿಸಿ 29ರ ರಾತ್ರಿ ಕಿನ್ನಿಗೋಳಿ ಸಮೀಪದ ಬಟ್ಟಕೊಡಿ ಮರದಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

30/12/2021 10:19 pm

Cinque Terre

9.23 K

Cinque Terre

0

ಸಂಬಂಧಿತ ಸುದ್ದಿ