ವರದಿ: ರಹೀಂ ಉಜಿರೆ
ಕೋಟ: ಮೊನ್ನೆ ರಾತ್ರಿ ಕೊರಗ ಸಮುದಾಯದ ರಾಜೇಶ್ ಎಂಬವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದಾಗ ಏಕಾಏಕಿ ನುಗ್ಗಿದ ಕೋಟ ಪೊಲೀಸರು ಲಾಠಿಚಾರ್ಜ್ ಮಾಡಿ ಮನಬಂದಂತೆ ಥಳಿಸಿದ್ದರು.ಈ ಪೊಲೀಸ್ ದೌರ್ಜನ್ಯ ಪ್ರಕರಣ ರಾಜ್ಯ ಮಟ್ಡದಲ್ಲಿ ಸುದ್ದಿಯಾಗುತ್ತಲೇ ಎಚ್ಚೆತ್ತುಕೊಂಡಿರುವ ಇಲಾಖೆ ,ಎಸ್ಸೈ ಯನ್ನು ಅಮಾನತು ಮಾಡಿ ಉಳಿದ ಐವರು ಪೊಲೀಸರನ್ನು ವರ್ಗಾವಣೆ ಮಾಡಿದೆ.
ಇಷ್ಟಾದರೂ ಈ ಪ್ರಕರಣದ ಕಿಚ್ಚು ಇನ್ನೂ ಆರಿಲ್ಲ.ಇವತ್ತು ಕೊರಗ ಸಂಘಟನೆಯ ಮುಖಂಡರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ,ಒಬ್ಬ ಎಸ್ಸೈಯನ್ನು ಅಮಾನತುಮಾಡಿದರೆ ಸಾಲದು.ಎಲ್ಲರನ್ನೂ ಅಮಾನತು ಮಾಡಬೇಕು.ಬರೀ ವರ್ಗಾವಣೆ ಮಾಡುವುದರಿಂದ ಶಿಕ್ಷೆ ಕೊಟ್ಡಂತೆ ಆಗುವುದಿಲ್ಲ.ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರತ ದೂರು ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು.ದನಿ ಇಲ್ಲದ ಕೊರಗ ಸಮುದಾಯದ ಮೇಲೆ ಬೇಕೆಂದೇ ಪೊಲೀಸರು ಈ ಕೃತ್ಯ ಎಸಗಿದ್ದಾರೆ.ಇವತ್ತು ರಾಜೇಶ್ ಅವರ ಮದುವೆ ಉತ್ತರಕನ್ನಡದಲ್ಲಿ ನಡೆಯುತ್ತಿದೆ.ಮದುವೆ ಕಾರ್ಯ ಮುಗಿದ ಬಳಿಕ ಪೊಲೀಸ್ ದೌರ್ಜನ್ಯದ ವಿರುದ್ಧ ಹೋರಾಟ ನಡೆಸುವುದಾಗಿ ಮುಖಂಡರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
29/12/2021 05:30 pm