ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಕಾರ್ಮಿಕ ಮಂಗಳವಾರ ಏಕಾಏಕಿ ಯಕ್ಷಗಾನ ಮೇಳದ ಸೌಂಡ್ ಸಿಸ್ಟಮ್ ಮಿಕ್ಸರ್ ಜೊತೆ ನಾಪತ್ತೆಯಾಗಿದ್ದಾನೆ.
ನಾಪತ್ತೆಯಾದ ಕಾರ್ಮಿಕನನ್ನು ಕೇರಳದ ಕಾಸರಗೋಡು ನಿವಾಸಿ ಭರತ್ (30) ಗುರುತಿಸಲಾಗಿದೆ.
ನಾಪತ್ತೆಯಾದ ನಿವಾಸಿ ಭರತ್ ಕಳೆದ ಒಂದು ತಿಂಗಳ ಹಿಂದೆ ಬಪ್ಪನಾಡು ಯಕ್ಷಗಾನ ಮೇಳಕ್ಕೆ ಕಾರ್ಮಿಕನಾಗಿ ಸೇರಿದ್ದು ಮಂಗಳವಾರ ಮೇಳದ ಮ್ಯಾನೇಜರ್ ಭವಾನಿ ಶಂಕರ್ ಶೆಟ್ಟಿ ಯವರು ಮೇಳದ ಸೌಂಡ್ ಸಿಸ್ಟಮ್ ಮಿಕ್ಸರ್ ರಿಪೇರಿಗೆಂದು ಮೇಳದ ಇನ್ನೋರ್ವ ಸಿಬ್ಬಂದಿ ಕೇಶವ ಎಂಬವರ ಜೊತೆ ಮಂಗಳೂರಿಗೆ ಕಳುಹಿಸಿದ್ದರು.
ಈ ಸಂದರ್ಭ ಮಂಗಳೂರಿನ ಬಂದರ್ ಎಂಬಲ್ಲಿ ಬಸ್ಸಿನಿಂದ ಇಳಿದ ಮೇಳದ ಕಾರ್ಮಿಕ ಭರತ್ ಸುಮಾರು 35 ಸಾವಿರ ರೂಪಾಯಿ ಬೆಲೆ ಬಾಳುವ ಸೌಂಡ್ ಸಿಸ್ಟಮ್ ಮಿಕ್ಸರ್ ಜೊತೆ ನಾಪತ್ತೆಯಾಗಿದ್ದಾನೆ ಎಂದು ಮೇಳದ ಮ್ಯಾನೇಜರ್ ಭವಾನಿ ಶಂಕರ್ ಶೆಟ್ಟಿ ಮೂಲ್ಕಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಾಪತ್ತೆಯಾದ ವ್ಯಕ್ತಿ ಕಂಡುಬಂದಲ್ಲಿ ಮುಲ್ಕಿ ಠಾಣೆಗೆ 08242290533 ದೂರವಾಣಿಯನ್ನು ಸಂಪರ್ಕಿಸಲು ಕೋರಲಾಗಿದೆ.
Kshetra Samachara
28/12/2021 07:27 pm