ಮಂಗಳೂರು: ನಗರದ ಅತ್ತಾವರ ಬಳಿಯ ನಂದಿಗುಡ್ಡೆಯಲ್ಲಿರುವ ಶ್ರೀ ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿಯ ಮೇಲೆ ಬಳಸಿದ ಕಾಂಡೋಮನ್ನು ಇರಿಸಿ ಅಪವಿತ್ರಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ ರಸ್ತೆ ಬದಿಯ ಕಾಣಿಕೆ ಡಬ್ಬಿಯ ಮೇಲ್ಭಾಗದಲ್ಲಿ ಕಾಂಡೋಮ್ ಕಂಡು ಬಂದಿದೆ. ವಿಷಯ ತಿಳಿಯುತ್ತಲೇ ಸ್ಥಳದಲ್ಲಿ ಭಕ್ತಾದಿಗಳ ಸಹಿತ ಸಂಘಟನೆಗಳ ಪ್ರಮುಖರು ಜಮಾಯಿಸಿದ್ದು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ದುಷ್ಕೃತ್ಯಕ್ಕೆ ಸ್ಥಳೀಯರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
PublicNext
28/12/2021 06:15 pm