ಸುಳ್ಳ: ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಾಲಾಯಿಸಿಲು ಕೊಟ್ಟಿದ್ದಕ್ಕೆ ಅಪ್ಪನಿಗೆ 10 ಸಾವಿರು ರೂಪಾಯಿ ದಂಡ ವಿಧಿಸಿದ ಘಟನೆ ತಾಲೂಕಿನ ದೇವಚಳ್ಳ ಗ್ರಾಮದಲ್ಲಿ ನಡೆದಿದೆ.
ದೇವಚಳ್ಳ ಗ್ರಾಮದ ಸುರೇಶ್ ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರವಾಹನ ಚಲಾಯಿಸಲು ಕೊಟ್ಟಿದ್ದರು. ಇದನ್ನ ಗಮನಿಸಿದ ಸುಬ್ರಮಣ್ಯ ಪೊಲೀಸರು ತಡೆದು ಕೇಸ್ ಹಾಕಿದ್ದರು.
ಅಪ್ರಾಪ್ತ ಮಗ ಕಾನೂನು ಉಲ್ಲಂಘಿಸಿ ದ್ವಿಚಕ್ರವಾಹನ ಚಲಾಯಿಸಿರೋದು ಸಾಬೀತಾದ ಮೇಲೆ ತಾಲೂಕಿನ ನ್ಯಾಯಾಲಯ ತಂದೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.
Kshetra Samachara
19/12/2021 01:27 pm