ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಷೇರು ಸಂಸ್ಥೆಯ ನಿರ್ದೇಶಕನಿಂದಲೇ 83 ಲಕ್ಷ ರೂ.ಗುಳುಂ: ದೂರು ದಾಖಲು

ಕುಂದಾಪುರ: ಮಹಿಳೆಯೊಬ್ಬರ ಷೇರ್ಸ್ ಅಕೌಂಟ್‌ನಲ್ಲಿದ್ದ ಲಕ್ಷಾಂತರ ರೂ. ಹಣವನ್ನು ಕಂಪನಿಯ ನಿರ್ದೇಶಕರು ದುರುಪಯೋಗ ಮಾಡಿ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಗಾಂಧಿ ಪಾರ್ಕ್ ಬಳಿಯ ನಿವಾಸಿ ಬಿ.ಸುಮತಿ ಬಾಯಿ, ಖಾರ್ವಿ ಷೇರ್ಸ್ ಬ್ರೋಕರೇಜ್ ಲಿಮಿಟೆಡ್ ಕಂಪನಿಯ ಕುಂದಾಪುರ ಶಾಖೆಯಲ್ಲಿ ಡಿ ಮ್ಯಾಟ್ ಎಕೌಂಟನ್ನು ತೆರೆದು ಅದರಲ್ಲಿ ಅವರ ಜೀವಿತದ ದುಡಿಮೆಯ ಉಳಿಕೆಯ ಹಣವನ್ನು ಹೂಡಿಕೆ ಮಾಡಿದ್ದರು. ಸಂಸ್ಥೆಯ ಮೂಲಕ ಕಂಪನಿಯೊಂದರ 4167 ಷೇರುಗಳನ್ನು ಖರೀದಿಸಿದ್ದು ಅದಕ್ಕೆ ತನ್ನ ಮಗ ವಾಸುದೇವ ಶಾನುಭಾಗ್ ಎಂಬವರನ್ನು ನಾಮಿನಿ ಮಾಡಿದ್ದರು.

ಸುಮತಿ 2014 ಡಿ.2ರಂದು ಮೃತಪಟ್ಟಿದ್ದು, ಬಳಿಕ ವಾಸುದೇವ, ತಾಯಿಯ ಡಿಮ್ಯಾಟ್ ಅಕೌಂಟ್ ಪರಿಶೀಲಿಸಿದಾಗ ಅದರಲ್ಲಿ ಯಾವುದೇ ಹಣ ಇಲ್ಲದೆ ಇರುವುದು ತಿಳಿದುಬಂತು. ಖಾರ್ವಿ ಷೇರ್ಸ್‌ನ ನಿರ್ದೇಶಕರು ವಾಸುದೇವ ಶಾನುಭಾಗ್ ಅವರಿಗೆ ತಿಳಿಸದೆ ಅವರ ತಾಯಿಯ ಷೇರಿನಲ್ಲಿದ್ದ 83,90,005 ರೂ. ಡ್ರಾ ಮಾಡಿ ಅವರ ಸ್ವಂತಕ್ಕೆ ಉಪಯೋಗಿಸಿ ನಂಬಿಕೆ ದ್ರೋಹ ಮಾಡಿರುವುದಾಗಿ ದೂರಲಾಗಿದೆ.

Edited By :
Kshetra Samachara

Kshetra Samachara

15/12/2021 11:50 am

Cinque Terre

10.29 K

Cinque Terre

0

ಸಂಬಂಧಿತ ಸುದ್ದಿ