ಮಂಗಳೂರು: ನಗರ ಹೊರವಲಯದ ನೀರುಮಾರ್ಗ ಸಮೀಪದ ಪಡು ಪೋಸ್ಟ್ ಆಫೀಸ್ ಬಳಿ ಕಾರನ್ನು ಅಡ್ಡಗಟ್ಟಿ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗಣೇಶ್ (23), ಚೇತನ್ (21), ಕೀರ್ತಿ ರಾಜ್(23), ಸುವೀತ್ (19), ಪರೀಕ್ಷಿತ್ (20) ಬಂಧಿತರು. ಡಿ. 10ರಂದು ರಾತ್ರಿ 7.30ರ ಸುಮಾರಿಗೆ ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೊಂಡಂತಿಲ ಗ್ರಾಮ ಪಡುವಿನಲ್ಲಿ ಅಡ್ಯಾರ್ ಪದವು ನಿವಾಸಿ ಮೊಹಮ್ಮದ್ ರಿಯಾಜ್ ಎಂಬವರು ಕಾರಿನಲ್ಲಿ ತಮ್ಮ ಮನೆ ಕಡೆಗೆ ತೆರಳುತ್ತಿದ್ದರು.
ಈ ವೇಳೆ ಏಳೆಂಟು ಮಂದಿಯಿದ್ದ ತಂಡ, ಬೈಕ್‌ನಿಂದ ಕಾರನ್ನು ಅಡ್ಡಗಟ್ಟಿ
ರಿಯಾಜ್ ರನ್ನು ಕಾರಿನಿಂದ ಹೊರಕ್ಕೆಳೆದು ಬ್ಯಾಟ್, ರಾಡ್, ಬಿಯರ್ ಬಾಟಲಿಗಳಿಂದ ಹಲ್ಲೆಗೈದು ಪರಾರಿಯಾಗಿದ್ದರು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Kshetra Samachara
14/12/2021 04:33 pm