ಮುಲ್ಕಿ: ಕಿನ್ನಿಗೋಳಿ ಬಸ್ ನಿಲ್ದಾಣ ಬಳಿಯ ಪಾದರಕ್ಷೆ ಅಂಗಡಿಗೆ ಯುವತಿ ಪಾದರಕ್ಷೆ ಖರೀದಿಸಲು ಬಂದಿದ್ದು, ಈ ಸಂದರ್ಭ ಅಂಗಡಿ ಮಾಲೀಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಯುವತಿಯ ದೂರಿನಂತೆ ಬಸ್ ನಿಲ್ದಾಣ ಬಳಿಯ ನಿವಾಸಿ ಶಂಸುದ್ದೀನ್ ಎಂಬಾತನನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಯುವತಿಗೆ ಕಿರುಕುಳ ನೀಡಿದ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಮುಲ್ಕಿ ರಾಮ್ ಸೇನಾ ಸಂಘಟನೆ ಹಾಗೂ ಹಿಂದೂ ಯುವಸೇನೆ ಮುಲ್ಕಿ ಘಟಕದ ಕಾರ್ಯಕರ್ತರು ಮುಲ್ಕಿ ಠಾಣೆಗೆ ಆಗಮಿಸಿ, ಪೊಲೀಸರಿಗೆ ಆರೋಪಿ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Kshetra Samachara
12/12/2021 08:13 pm