ಬಂಟ್ವಾಳ: ಮನೆಯೊಳಗೇ ನುಗ್ಗಿ ಮುಸ್ಲಿಂ ಮಹಿಳೆ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಆದರೆ ಯಾವ ತಾಲೂಕು, ಗ್ರಾಮದಲ್ಲಿ ಎನ್ನುವುದು ದೃಢ ಪಟ್ಟಿಲ್ಲ.
ನಿರ್ಮಾಣ ಹಂತದ ಮನೆಯ ಒಳಗಿದ್ದ ವೇಳೆ ಹಿಂಬಾಗಿಲ ಮೂಲಕ ನುಗ್ಗಿದ ಇನ್ನೊಬ್ಬ ಮಹಿಳೆ ಮತ್ತು ಕೆಲವು ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿ ಪೈಪ್ ಮತ್ತು ಸೋಂಟೆಯಲ್ಲಿ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ಮಹಿಳೆ ಮತ್ತು ಯುವಕರು ಆಕೆಯ ಸಂಬಂಧಿಕರೇ ಎನ್ನಲಾಗುತ್ತಿದ್ದು, ಎಲ್ಲಿ ಘಟನೆ ನಡೆದಿದೆ ಎಂಬ ಬಗ್ಗೆ ಬಂಟ್ವಾಳ ಪೊಲೀಸರ ಬಳಿ ಕೇಳಿದರೆ, ಎಲ್ಲಿ ಆಗಿದೆ ಎನ್ನುವುದು ದೃಢ ಪಟ್ಟಿಲ್ಲ ಎಂದಿದ್ದಾರೆ. ಹಲ್ಲೆಯ ವೀಡಿಯೊ ವೈರಲ್ ಆಗ್ತಿದ್ದಂತೆಯೇ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ, ತನಿಖೆ ನಡೆಸಲು ಮುಂದಾಗಿದ್ದಾರೆ.
Kshetra Samachara
12/12/2021 04:37 pm