ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ತಂಪು ನೆರಳ ಮರಕ್ಕೆ ದುರುಳರ ಕೊಡಲಿಯೇಟು!; ಆಟೋ ಚಾಲಕರು ಗರಂ

ಮುಲ್ಕಿ: ಮುಲ್ಕಿ ರಾಷ್ಟ್ರೀಯ ಹೆದ್ದಾರಿಯ ವಿಜಯ ಸನ್ನಿಧಿ ಬಳಿಯ ತಡೆರಹಿತ ಬಸ್‌ ನಿಲ್ದಾಣದ ಹಿಂಭಾಗದ ಆಟೋ ನಿಲ್ದಾಣದಲ್ಲಿ ನೆರಳನ್ನು ನೀಡುವ ವೃಕ್ಷಗಳನ್ನು ಕತ್ತರಿಸಲಾಗಿದೆ.

ಆಟೋ ನಿಲ್ದಾಣದ ಬಳಿ ಬೃಹತ್ ಜಾಹೀರಾತು ಫಲಕವಿದ್ದು, ಫಲಕಕ್ಕೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ ಈ ಪರೋಪಕಾರಿ ಮರಗಳನ್ನು ಕಡಿಯಲಾಗುತ್ತಿದೆ ಎಂದು ಆಟೋರಿಕ್ಷಾ ಚಾಲಕರು ಆರೋಪಿಸಿದ್ದಾರೆ.

ಈ ಬಗ್ಗೆ ಆಟೋಚಾಲಕರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಮರ ತುಂಡರಿಸಿದ ಜಾಹೀರಾತು ಫಲಕದ ಸಂಬಂಧಪಟ್ಟವರನ್ನು ವಿಚಾರಿಸಿದ್ದಾರೆ. ಬಿಸಿಲಿನ ತಾಪದಿಂದಾಗಿ ಇದೀಗ ಸೂರು ರಹಿತ ನಿಲ್ದಾಣದ ಆಟೋ ಚಾಲಕರು ಕಂಗಾಲಾಗಿದ್ದು, ವೃಕ್ಷ ಕತ್ತರಿಸಿದ ದುರುಳರನ್ನು ಶಿಕ್ಷಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

09/12/2021 09:15 pm

Cinque Terre

20.21 K

Cinque Terre

0

ಸಂಬಂಧಿತ ಸುದ್ದಿ