ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಯತ್ನ- ಆರೋಪಿ ಅರೆಸ್ಟ್

ಉಳ್ಳಾಲ: ತಲಪಾಡಿಯಲ್ಲಿ ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ಹಾಗೂ ಉಚ್ಚಿಲದಲ್ಲಿ 19 ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕೆ.ಸಿ.ರೋಡ್‌ನ ಮುಳ್ಳುಗುಡ್ಡೆ ನಿವಾಸಿ ರಾಝಿಕ್(22) ಬಂಧಿತ ಆರೋಪಿ. ಬುಧವಾರ ಬೆಳಗ್ಗೆ 14 ವರ್ಷ ಪ್ರಾಯದ ವಿದ್ಯಾರ್ಥಿನಿ ತನ್ನ ತಂಗಿಯೊಂದಿಗೆ ತಲಪಾಡಿ ಅಲಂಕಾರ ಗುಡ್ಡೆಯಿಂದ ನಡೆದುಕೊಂಡು ತಲಪಾಡಿ ಚೆಕ್ ಪೋಸ್ಟ್ ರಸ್ತೆಯಾಗಿ ಶಾಲೆಗೆ ತೆರಳುತ್ತಿದ್ದಳು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ರಾಝಿಕ್ ಆಕೆಯ ಕೈ ಎಳೆದು ಲೈಂಗಿಕ ಕಿರುಕುಳ ನೀಡಿದ್ದ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ ಅದೇ ದಿನ ಬೆಳಗ್ಗೆ ಉಚ್ಚಿಲದಲ್ಲಿ ಕಾಲೇಜಿಗೆ ಹೋಗುತ್ತಿದ್ದ 19 ಹರೆಯದ ಯುವತಿಯೊಬ್ಬಳಿಗೆ ರಾಝಿಕ್ ಕಿರುಕುಳ ನೀಡಿದ್ದ. ಈ ಬಗ್ಗೆ ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಳು. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಸಿಸಿಬಿ ಹಾಗೂ ಉಳ್ಳಾಲ ಠಾಣಾ ಇನ್‌ಸ್ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿ‌ ಸಿಸಿಟಿವಿ ಆಧಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗುರುವಾರ ಬೆಳಗ್ಗೆ ಕೆ.ಸಿ.ರೋಡ್ ನಲ್ಲಿ ಆರೋಪಿ ರಾಝಿಕ್ ನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿವೆ.

Edited By : Vijay Kumar
Kshetra Samachara

Kshetra Samachara

02/12/2021 10:31 pm

Cinque Terre

8.85 K

Cinque Terre

4

ಸಂಬಂಧಿತ ಸುದ್ದಿ