ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಗ್ರಾಹಕರ ಹೆಸರಲ್ಲಿ ನಕಲಿ ಚಿನ್ನ ಅಡವು; ವಂಚಕ ' ಮನ್ಮಥ' ಅಂದರ್

ಬೆಳ್ತಂಗಡಿ: ಚಿನ್ನ ಪರಿವೀಕ್ಷಕನೊಬ್ಬ ಗ್ರಾಹಕರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ವಂಚಿಸಿದ ಘಟನೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ನಡೆದಿದೆ.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅರಸಿನಮಕ್ಕಿ ಶಾಖೆಯಲ್ಲಿ ಚಿನ್ನ ಪರಿವೀಕ್ಷಕನಾಗಿರುವ ಮನ್ಮಥ ಆಚಾರಿ ಎಂಬಾತ 2010ರಿಂದ 2019ರ ವರೆಗೂ ಅರಸಿನಮಕ್ಕಿ, ಶಿಬಾಜೆ, ಹತ್ಯಡ್ಕ ಗ್ರಾಮಸ್ಥರಿಗೆ ಟೋಪಿ ಹಾಕಿದ್ದಾನೆ. ಬರೋಬ್ಬರಿ 52 ಮಂದಿ ಮನ್ಮಥನ ವಂಚನೆಗೆ ಒಳಗಾಗಿದ್ದು, ಈಗ ಬ್ಯಾಂಕಿನಿಂದ ಪೊಲೀಸ್ ಕೇಸು ಎದುರಿಸುತ್ತಿದ್ದಾರೆ.

ಈ ವಂಚನೆಯಲ್ಲಿ ಬ್ಯಾಂಕ್ ಸಿಬಂದಿ ಮತ್ತು ಮ್ಯಾನೇಜರುಗಳೇ ಶಾಮೀಲಾಗಿದ್ದಾರೆ. ಕಳೆದ ಬಾರಿ ಮನ್ಮಥ ಆಚಾರಿಯಿಂದಾಗಿ ಚಿನ್ನ ಅಡವಿಟ್ಟು ವಂಚನೆಗೆ ಒಳಗಾಗಿದ್ದ ಶಿಬಾಜೆಯ ಅಶ್ವಥ್ ಎಂಬವರು ಬ್ಯಾಂಕಿನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು! ಇನ್ನು ಬ್ಯಾಂಕ್ ಮ್ಯಾನೇಜರ್ ಚಿನ್ನ ಪರಿವೀಕ್ಷಕನಿಗೆ ಶಿಕ್ಷೆ ಕೊಡಿಸುವ ಬದಲು 52 ಮಂದಿಯ ವಿರುದ್ಧವೇ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ!

ಪೊಲೀಸರು ಆರೋಪಿ ಮನ್ಮಥ ಆಚಾರಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ತಾನೇ 52 ಮಂದಿಯ ಹೆಸರಲ್ಲಿ ನಕಲಿ ಚಿನ್ನವಿಟ್ಟು ವಂಚನೆ ಎಸಗಿದ್ದಾಗಿ ಲಿಖಿತ ಹೇಳಿಕೆ ನೀಡಿದ್ದಾನೆ. ಆ ಮೂಲಕ ತನ್ನ ವಂಚನೆಯನ್ನು ಒಪ್ಪಿಕೊಂಡಿದ್ದಾನೆ. ಹೀಗಿದ್ದರೂ, ಬ್ಯಾಂಕ್ ಸಿಬಂದಿ ಮಾತ್ರ ಗ್ರಾಹಕರಲ್ಲಿ ಹಣ ಮರಳಿಸುವಂತೆ ಹೇಳುತ್ತಿದ್ದಾರೆ! ಅಲ್ಲದೆ, ಈ ಗ್ರಾಹಕರ ಖಾತೆಗಳನ್ನೇ ಸೀಝ್ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

30/11/2021 02:49 pm

Cinque Terre

25.66 K

Cinque Terre

0

ಸಂಬಂಧಿತ ಸುದ್ದಿ