ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಇಂದು ಸಂಜೆ ಪರಾರಿಯಾಗಿದ್ದಾನೆ.
ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು ಬಂಧಿಸಿದ್ದು, ಇಂದು ಸಂಜೆ ತನಿಖೆಗೆ ಕೊಂಡೊಯ್ಯುವ ವೇಳೆ ಏಕಾಏಕಿ ಜೀಪಿನಿಂದ ಹಾರಿ ಪರಾರಿಯಾಗಿ ಪಂಚಮಹಲ್ ದೇವಸ್ಥಾನದ ಹಿಂದಿನ ಬದಿಯಲ್ಲಿ ತೋಡಿಗೆ ಹಾರಿ ಪರಾರಿಯಾಗಿದ್ದಾನೆ.
ಕಳೆದ ದಿನಗಳ ಹಿಂದೆ ಠಾಣೆಯಿಂದ ಕಿರಣ್ ಎಂಬ ವಿಚಾರಣಾಧೀನ ಕೈದಿ ಇದೇ ರೀತಿಯಲ್ಲಿ ಪರಾರಿಯಾಗಿದ್ದು, ಪೊಲೀಸರು ಸ್ಥಳೀಯ ರಿಕ್ಷಾ ಚಾಲಕರ ಸಹಾಯದೊಂದಿಗೆ ಬಂಧಿಸಿದ್ದರು.
ಇದೀಗ ಮತ್ತೊಮ್ಮೆ ಇನ್ನೊಬ್ಬ ಕೈದಿ ಪರಾರಿಯಾಗಿದ್ದು ಪೊಲೀಸರು ಮುಲ್ಕಿ ಬಸ್ ನಿಲ್ದಾಣ, ಪಂಚ ಮಹಲ್ ರಸ್ತೆ , ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ವಿಚಾರಣಾಧೀನ ಕೈದಿಗಳ ತನಿಖೆಯಲ್ಲಿ ಮುಲ್ಕಿ ಪೊಲೀಸರ ಬಂದೋಬಸ್ತು ವಿಫಲವಾಗಿ ಕೈದಿಗಳು ಪರಾರಿಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕಗೊಂಡಿದ್ದು, ಮುಲ್ಕಿ ಪೊಲೀಸರು "ಕಳ್ಳ - ಪೊಲೀಸ್" ಆಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
28/11/2021 09:24 pm