ಮಂಗಳೂರು: ನಗರದ ಕೂಳೂರು ಹಾಗೂ ಕೋಡಿಕಲ್ ನಲ್ಲಿ ನಾಗಬನಕ್ಕೆ ನುಗ್ಗಿ ನಾಗದೇವರ ಬಿಂಬದ ಕಲ್ಲಿಗೆ ಹಾನಿ ಮಾಡಿದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಫ್ವಾನ್, ಪ್ರವೀಣ್ ಅನಿಲ್ , ಮಹಮ್ಮದ್ ಸೊಹೇಲ್, ನಿಕಿಲೇಶ್, ಜಯಂತ್,
ಪ್ರತೀಕ್, ಮಂಜುನಾಥ್, ನೌಶಾದ್ ಹರೇಹಳ್ಳಿ ಬೇಲೂರು ಬಂಧಿತರು.
ಮಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ಈ ಪ್ರಕರಣವನ್ನು ಖಂಡಿಸಿ, ಹಿಂದೂ ಸಂಘಟನೆಗಳು ಕೋಡಿಕಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದವು. ಅಲ್ಲದೆ, ದುಷ್ಕರ್ಮಿಗಳ ಬಂಧನಕ್ಕೆ 20 ದಿನಗಳ ಗಡುವು ನೀಡಲಾಗಿತ್ತು. ಮೂಲ್ಕಿ, ಮೂಡುಬಿದಿರೆ, ಪಣಂಬೂರು, ಕಾವೂರು ಠಾಣೆ ಸೇರಿ 40 ಪೊಲೀಸ್ ಸಿಬಂದಿ ತಂಡವನ್ನು ರಚಿಸಲಾಗಿತ್ತು.
ಕಾರ್ಯಾಚರಣೆ ನಡೆಸಿದ ಪೊಲೀಸರು ಸುರತ್ಕಲ್, ಬಂಟ್ವಾಳ, ಹಾಸನ ಮೂಲದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಪ್ರವೀಣ್ ಮೊಂತೇರೊ ಎಂಬಾತ ಈ ಹಿಂದೆ ಡಕಾಯಿತಿ, ದರೋಡೆ ಕೇಸನ್ನೂ ಎದುರಿಸುತ್ತಿದ್ದ. ಜೈಲಿನಲ್ಲಿದ್ದ ವೇಳೆ ಇವರೊಳಗೆ ಸಂಪರ್ಕ ಆಗಿತ್ತು. ಬಂಧಿತರು ಕೂಳೂರು ಮತ್ತು ಕೋಡಿಕಲ್ ನ ಎರಡೂ ಪ್ರಕರಣಗಳನ್ನು ಒಪ್ಪಿದ್ದು, ಸರಗಳ್ಳತನ ಪ್ರಕರಣದ ಆರೋಪಿಗಳಾದ ಇಶಾನ್, ಅಚ್ಚಿ ಎಂಬವರ ಸೂಚನೆಯಂತೆ ಕುಕೃತ್ಯಕ್ಕೆ ಸಂಚು ಹೂಡಿದ್ದರು.
Kshetra Samachara
27/11/2021 02:00 pm