ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಕ್ರಮ ಮರಳು ಸಾಗಾಟ ಟಿಪ್ಪರ್ ನ್ನು ರೆಡ್ ಹ್ಯಾಂಡಾಗಿ ಹಿಡಿದರೂ,ಟಿಪ್ಪರ್ ನೊಂದಿಗೆ ಪರಾರಿಯಾದರು!

ಉಡುಪಿ: ಜಿಲ್ಲೆಯಲ್ಲಿ ಯಾವ ರೀತಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬುದಕ್ಕೆ ಇವತ್ತು ನಡೆದ ಒಂದು ಘಟನೆಯೇ ಸಾಕ್ಷಿ.

ಉಡುಪಿಯ ಕೊರಂಗ್ರಪಾಡಿ ಸಮೀಪ ಅಕ್ರಮವಾಗಿ ಎರಡು ನಂಬರ್ ಪ್ಲೇಟ್ ಹಾಕಿಕೊಂಡು ಮರಳು ಸಾಗಿಸುತ್ತಿದ್ದ ಟಿಪ್ಪರ್ ನ್ನು ಲಾರಿ ಮತ್ತು ಟೆಂಪೋ ಚಾಲಕರ ಸಂಘದವರೇ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಈ ಟಿಪ್ಪರ್ ನಲ್ಲಿ ಎರಡು ನಂಬರ್ ಪ್ಲೇಟ್ ಗಳಿದ್ದವು! ಟಿಪ್ಪರ್ ಗೆ ಜಿಪಿಎಸ್ ಅಳವಡಿಸಿರಲಿಲ್ಲ.ಟ್ರಿಪ್ ಶೀಟ್ ಕೂಡ ಇರಲಿಲ್ಲ. ಹಿಂಬದಿ ಒಂದು ನಂಬರ್ ಮತ್ತು ಮುಂಭಾಗ ಇನ್ನೊಂದು ನಂಬರ್ ಇದ್ದುದನ್ನು ಗಮನಿಸಿದ ಸ್ಥಳೀಯ ಟೆಂಪೋ ಚಾಲಕ ಮಾಲಕ ಸಂಘದವರಿಗೆ ಅನುಮಾನ ಬಂದಿದೆ.ಟಿಪ್ಪರ್ ನ್ನು ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ವೇಳೆ ಎರಡೂ ಕಡೆಯವರು ಕೆಲ ಹೊತ್ತು ಮಾತಿನ ಚಕಮಕಿ ನಡೆಸಿದ್ದಾರೆ.ಬಳಿಕ ಪೊಲೀಸರು ಮತ್ತು ಗಣಿ ಇಲಾಖೆಯವರಿಗೆ ಮಾಹಿತಿ ಹೋಗಿದೆ.

ಈ ಟಿಪ್ಪರ್ ನ್ನು ಠಾಣೆಗೆ ತರುವಂತೆ ಪೊಲೀಸರು ಸೂಚಿಸಿದ್ದಾರೆ.ಸುದ್ದಿ ತಿಳಿದು ಗಣಿ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸುತ್ತಾರೆ.ಆದರೆ ಪೊಲೀಸ್ ಠಾಣೆಗೆ ಹೋಗುತ್ತೇನೆ ಎಂದು ಹೇಳಿದ ಚಾಲಕ ಟಿಪ್ಪರ್ ನೊಂದಿಗೆ ಪರಾರಿಯಾಗಿದ್ದಾನೆ! ಈ ಇಡೀ ಹೈಡ್ರಾಮಾದ ಹಿಂದೆ ಅಕ್ರಮ ಮರಳುಗಾರಿಕೆ ಲಾಬಿ ಇದೆ ಎನ್ನಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Edited By : Manjunath H D
Kshetra Samachara

Kshetra Samachara

25/11/2021 06:54 pm

Cinque Terre

15.03 K

Cinque Terre

0

ಸಂಬಂಧಿತ ಸುದ್ದಿ