ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಮಕ್ಕಳ ರಕ್ಷಿಸಿ, ಕಣಜದ ಹುಳು ದಾಳಿಗೆ ಬಲಿಯಾದ ಗೃಹರಕ್ಷಕ ಸಂತೋಷ್!

ಮುಲ್ಕಿ: ಕಿನ್ನಿಗೋಳಿ ಸಮೀಪದ ಶ್ರೀ ರಾಮ ಮಂದಿರ ಬಳಿ ಕಣಜದ ಹುಳು ಕಡಿದು ಗೃಹರಕ್ಷಕ ದಳ ಸಿಬ್ಬಂದಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತಪಟ್ಟವರು.

ಸಂತೋಷ್ ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿಯಾಗಿದ್ದು, ಬುಧವಾರ ಸಂಜೆ ಶ್ರೀರಾಮ ಮಂದಿರ ಬಳಿ ಆಟೋದಲ್ಲಿ ಹೋಗುತ್ತಿದ್ದಾಗ ಕಣಜದ ಹುಳುಗಳು ಕಿನ್ನಿಗೋಳಿ ಪರಿಸರದ ಶಾಲೆಯ ಕೆಲ ಮಕ್ಕಳಿಗೆ ಕಡಿದು ಗಂಭೀರಾವಸ್ಥೆಯಲ್ಲಿದ್ದರು. ಇದನ್ನು ಕಂಡ ಕೂಡಲೇ ಸಂತೋಷ್, ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಿಸಿ ಕಿನ್ನಿಗೋಳಿಯ ಕಾನ್ಸೆಟ್ಟಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಕ್ಕಳ ರಕ್ಷಣೆ ಸಂದರ್ಭ ಕಣಜದ ಹುಳು ಸಂತೋಷ್ ಅವರಿಗೂ ಕಡಿದಿದ್ದು, ಆದರೆ, ಅವರು ಯಾವುದೇ ಚಿಕಿತ್ಸೆ ಪಡೆಯದೆ ಮನೆ ಕಡೆ ತೆರಳಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಕುರ್ಚಿಯಲ್ಲಿ ಕುಳಿತವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಮೂವರು ಮಕ್ಕಳು, ತಾಯಿ ಮತ್ತು ಅಣ್ಣ ಇದ್ದಾರೆ.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ, ತಾಲೂಕು ಸಂಚಾಲಕರಾದ ರಘು ಎಕ್ಕಾರು, ಸುರೇಶ್ ಬೆಳ್ಳಾಯರು, ಸಾಮಾಜಿಕ ಕಾರ್ಯಕರ್ತ ಭೀಮಾಶಂಕರ್, ಮುಲ್ಕಿ ನ.ಪಂ ಸದಸ್ಯ ಪುತ್ತುಬಾವ ಮೃತರ ಅಂತಿಮ ಕ್ರಿಯೆಗೆ ಸಹಕರಿಸಿದರು. ಆರು ಮಕ್ಕಳ ಜೀವ ಉಳಿಸಿ, ಮಾನವೀಯತೆ ಮೆರೆದ ಸಂತೋಷ್ ಅವರ ಕೈಂಕರ್ಯ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

Edited By : Nagaraj Tulugeri
Kshetra Samachara

Kshetra Samachara

18/11/2021 04:04 pm

Cinque Terre

13.15 K

Cinque Terre

6

ಸಂಬಂಧಿತ ಸುದ್ದಿ