ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಬಾಲಕಿ ಗರ್ಭಿಣಿ ಪ್ರಕರಣ; ಸಂಬಂಧಿಕ ಯುವಕನೇ 'ಕಾಮುಕ!'

ಕಡಬ: ತಾಲೂಕಿನ ಕೋಡಿಂಬಾಳ ಗ್ರಾಮದಲ್ಲಿ ಬಾಲಕಿ ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಾಲಕಿಯ ಸಂಬಂಧಿಕನನ್ನೇ ಪೋಕ್ಸೊ ಕಾಯ್ದೆಯಡಿ ಕಡಬ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಡಿಂಬಾಳದ ಪಾಜೋವು ಬಳಿಯ ರಮೇಶ್ ಎಂಬಾತ ತನ್ನ ಸಂಬಂಧಿ ಬಾಲಕಿಯನ್ನೇ ಒಂದೂವರೆ ವರ್ಷದಿಂದ ಲೈಂಗಿಕವಾಗಿ ಸತತ ಬಳಸಿಕೊಂಡಿದ್ದ ಕಾಮುಕ. ಇದೀಗ ಆಕೆ ಗರ್ಭವತಿಯಾಗಿದ್ದು, ಆರೋಪಿ ವಿರುದ್ಧ 'ಪೋಕ್ಸೊ' ದಾಖಲಿಸಲಾಗಿದೆ.

2020ರ ಏಪ್ರಿಲ್ ನಿಂದ ರಮೇಶ್, ಆಗಾಗ ಬಾಲಕಿ ಮನೆಗೆ ಬಂದು ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಬಾಲಕಿ ಗರ್ಭವತಿಯಾಗಿದ್ದು, ಈ ವಿಚಾರ ಯಾರಿಗೂ ತಿಳಿಸಬಾರದೆಂದು ಬಾಲಕಿಗೆ ಬೆದರಿಕೆ ಹಾಕಿದ್ದ. ಇದರಿಂದಾಗಿ ಈ ವಿಷಯವನ್ನು ಬಾಲಕಿ ಯಾರಿಗೂ ತಿಳಿಸಿರಲಿಲ್ಲ.

ಬಾಲಕಿ ಗರ್ಭವತಿಯಾದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದು, ತಪಾಸಣೆಗಾಗಿ ತನ್ನ ಅಜ್ಜಿಯೊಂದಿಗೆ ಕಡಬ ಸಮುದಾಯ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭ ಗರ್ಭಿಣಿಯಾಗಿರುವ ವಿಚಾರ ವೈದ್ಯರಿಂದ ತಿಳಿದ ಬಳಿಕ ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪರೀಕ್ಷೆ ನಡೆಸಿದಾಗ ಬಾಲಕಿ ಒಂದೂವರೆ ತಿಂಗಳ ಗರ್ಭಿಣಿ ಎಂಬುದು ದೃಢಪಟ್ಟಿದೆ. ಬಳಿಕ ರಮೇಶ್ ವಿರುದ್ಧ ಬಾಲಕಿ ದೂರು ನೀಡಿದ್ದು, ಕಡಬ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

11/11/2021 05:48 pm

Cinque Terre

11.6 K

Cinque Terre

0

ಸಂಬಂಧಿತ ಸುದ್ದಿ