ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದಲ್ಲಿ ಬಸ್ ನಿರ್ವಾಹಕ ಚಾಲಕ ಹಾಗೂ ಪ್ರಯಾಣಿಕನ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಮುಲ್ಕಿ ಪೊಲೀಸರು ಪರೀಸ್ಥಿತಿ ನಿಯಂತ್ರಿಸಿದ್ದಾರೆ
ಮಂಗಳೂರಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸರ್ವಿಸ್ ಬಸ್ ಚಾಲಕ ನಜೀರ್ ಎಂಬಾತ ಮಂಗಳೂರು ಬಸ್ಸು ನಿಲ್ದಾಣದಿಂದ ಮುಲ್ಕಿ ವರೆಗೆ ಬಸ್ ಚಾಲನೆ ಮಾಡುತ್ತಿರುವಾಗ ಮೊಬೈಲ್ನಲ್ಲಿ ಮಾತನಾಡುತ್ತಿದ್ದು ಅಜಾಗರೂಕತೆಯಿಂದ ವರ್ತಿಸಿದ್ದಾನೆ ಎಂದು ಅದೇ ಬಸ್ಸಿಗೆ ಹತ್ತಿದ ಪ್ರಯಾಣಿಕ ಸುರತ್ಕಲ್ ಸಮೀಪದ ತಡಂಬೈಲ್ ಮೂಲದ ಪ್ರದೀಪ್ ಕುಮಾರ್ ಎಂಬವರು ಆರೋಪಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂದರ್ಭ ಚಾಲಕ ಹಾಗೂ ನಿರ್ವಾಹಕ ಒಟ್ಟು ಸೇರಿ ಪ್ರಯಾಣಿಕ ಪ್ರದೀಪ್ ಎಂಬವರ ಜೊತೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆಸಿದ್ದಾರೆ.
ಈ ಸಂದರ್ಭ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತೆರಳಿ ತಡಂಬೈಲ್ ನಲ್ಲಿ ಇಳಿಯಬೇಕಾದ ಪ್ರಯಾಣಿಕ ಪ್ರದೀಪ್ ಮುಲ್ಕಿ ಕಡೆಗೆ ಬಂದು ಮುಲ್ಕಿ ಬಸ್ ನಿಲ್ದಾಣದಲ್ಲಿ ಮತ್ತೆ ಗಲಾಟೆ ಜೋರಾಗಿ ಲಕ್ಷಣ ಕಂಡು ಬರುತ್ತಿದ್ದಂತೆ ಮುಲ್ಕಿ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಈ ನಡುವೆ ಬಸ್ ಚಾಲಕ ನಜೀರ್ ಪ್ರಯಾಣಿಕ ಪ್ರದೀಪ್ ತನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿ ಮೊಬೈಲ್ ಮೂಲಕ ಆತನ ಫೋಟೋ ಕ್ಲಿಕ್ಕಿಸಿದಾಗ ಮತ್ತೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭ ಮುಲ್ಕಿ ಎಸ್ಸೈ ವಿನಾಯಕ ತೋರಗಲ್ ಮಧ್ಯಪ್ರವೇಶಿಸಿ ಚಾಲಕ-ನಿರ್ವಾಹಕನಿಗೆ ಎಚ್ಚರಿಕೆ ನೀಡಿದ್ದು ಮೊಬೈಲ್ ಮೂಲಕ ಮಾತನಾಡಿ ಬಸ್ಸು ಚಾಲನೆ ನಡೆಸಿದ್ದಕ್ಕೆ ಚಾಲಕ ನಜೀರ್ ಗೆ ದಂಡ ವಿಧಿಸಿದ್ದಾರೆ.
Kshetra Samachara
09/11/2021 04:24 pm