ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕಿಗೆ ಲೈಂಗಿಕ ಕಿರುಕುಳ; ರಾಜು ಹೊಸ್ಮಠ ವಿರುದ್ದ ಪೋಕ್ಸೊ ದಾಖಲು

ಪುತ್ತೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಅಂಬೇಡ್ಕರ್‌ ಆಪತ್ಪಾಂಧವ ಟ್ರಸ್ಟ್‌ ನ ಅಧ್ಯಕ್ಷನ ವಿರುದ್ದ ನ. 7 ರಂದು ಪೋಕ್ಸೊ ಪ್ರಕರಣ ದಾಖಲಾಗಿದೆ. ರಾಜು ಹೊಸ್ಮಠ ಆರೋಪಿಯಾಗಿದ್ದು, ಈತನ ವಿರುದ್ಧ ಪುತ್ತೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತ: ಕೌಡಿಚ್ಚಾರ್‌ ನಿವಾಸಿ ಸದ್ಯ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸಂತ್ರಸ್ತೆಯ ಕುಟುಂಬವೂ ವಾಸಿಸುತ್ತಿದೆ. ಸಂತ್ರಸ್ತೆಗೆ ಆರೋಪಿಯ ಪರಿಚಯ 2019 ರಲ್ಲಿ ಆಗಿತ್ತು ಎಂದು ಹೇಳಲಾಗಿದೆ. ಆರೋಪಿಯೂ ಮದುವೆಯಾಗುವುದಾಗಿ ನಂಬಿಸಿ ಸಂತ್ರಸ್ತೆಗೆ ಆತನ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಸಂತ್ರಸ್ತೆಯ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಕಾಯ್ದೆ- 2012ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

Edited By : Nirmala Aralikatti
Kshetra Samachara

Kshetra Samachara

08/11/2021 04:25 pm

Cinque Terre

15.67 K

Cinque Terre

0

ಸಂಬಂಧಿತ ಸುದ್ದಿ