ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಗೋ ಕಳ್ಳತನ- ಮೂವರ ಬಂಧನ

ಮೂಡುಬಿದಿರೆ: ಮೂರು ದಿನಗಳ ಹಿಂದೆ ಅಳಿಯೂರಿನ ಮನೆಯೊಂದರ ತೋಟದಲ್ಲಿ ಕಟ್ಟಿ ಹಾಕಲಾಗಿದ್ದ ದನವನ್ನು ಕಳವುಗೈದು ಶನಿವಾರ ಮಾರಾಟ ಮಾಡಲು ಪಿಕ್‌ಅಪ್ ವಾಹನದಲ್ಲಿ ಹೋಗುತ್ತಿದ್ದವರನ್ನು ಸಾರ್ವಜನಿಕರು ತಡೆದು, ಪೊಲೀಸರಿಗೊಪ್ಪಿಸಿದ್ದಾರೆ.

ವಾಲ್ಪಾಡಿ ಗ್ರಾಮದ ಪವನ್ ಕುಮಾರ್, ಪುರಸಭೆ ವ್ಯಾಪ್ತಿಯ ಮಾರೂರಿನ ಸತೀಶ್, ಜಯಾನಂದ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಗಿರೀಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ವಾಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳಿಯೂರಿನ ಗಣೇಶ್ ಎಂಬವರ ಮನೆಯ ತೋಟದಲ್ಲಿ ಕಟ್ಟಲಾದ ದನವನ್ನು ಕದ್ದಿದ್ದರು.

ಶನಿವಾರ ಅದನ್ನು ಮಾರಾಟ ಮಾಡಲು ಹೋಗುತ್ತಿದ್ದ ವೇಳೆ, ಸಾರ್ವಜನಿಕರು ಗಮನಿಸಿ, ಶಿರ್ತಾಡಿ ಸೇತುವೆಯ ಬಳಿ ಗಾಡಿ ನಿಲ್ಲಿಸಿ ವಿಚಾರಿಸಿದ್ದಾರೆ. ಈ ವೇಳೆ ಆರೋಪಿಗಳು ಸುಳ್ಳು ಮಾಹಿತಿ ನೀಡಿದ್ದು, ಗಣೇಶ್ ಎಂಬವರು ಬಂದು ನೋಡಿದಾಗ ತಮ್ಮ ಮನೆಯ ಹಸುವೆಂದು ಖಾತ್ರಿಯಾಗಿದೆ. ಬಳಿಕ ಮೂಡುಬಿದಿರೆ ಪೊಲೀಸರಿಗೆ ಆರೋಪಿಗಳನ್ನು ಒಪ್ಪಿಸಲಾಗಿದೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

07/11/2021 07:02 pm

Cinque Terre

13.69 K

Cinque Terre

5

ಸಂಬಂಧಿತ ಸುದ್ದಿ