ಮೂಡುಬಿದಿರೆ: ಸುಮಾರು 15 ವರ್ಷಗಳಿಂದ ವಿವಿಧ ಉದ್ಯಮಿಗಳು ಮತ್ತು ಗಣ್ಯ ವ್ಯಕ್ತಿಗಳ ಹೆಸರಲ್ಲಿ ಅಂಚೆ ಪತ್ರ ರವಾನಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಮತ್ತು ಆತನ ಸಿಬ್ಬಂದಿಯನ್ನು ಪತ್ತೆ ಹಚ್ಚಿದ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಕಲ್ಲಮುಂಡ್ಕೂರು ವ್ಯವಸಾಯ ಬ್ಯಾಂಕ್ ಅಧ್ಯಕ್ಷ ಜೋಕಿಂ ಮತ್ತು ಆತನ ಸಿಬ್ಬಂದಿ ಅರುಣ್ ಭಟ್ ಆರೋಪಿಗಳು. ಜೋಕಿಂ ತನ್ನ ಆಪ್ತರಿಗೆ ಅನ್ಯ ವ್ಯಕ್ತಿ ಹೆಸರಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ಇದ್ದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದಾಗ ಜೋಕಿಂ ಸಿಬ್ಬಂದಿ ಸಿಕ್ಕಿಬಿದ್ದಿದ್ದು, ತನ್ನ ಮಾಲೀಕನ ಸೂಚನೆಯಂತೆ ನಾನು ಕೃತ್ಯ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
Kshetra Samachara
23/10/2021 08:55 pm