ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕ್ಷುಲ್ಲಕ ವಿಚಾರದಲ್ಲಿ ಜಗಳ; ವ್ಯಾಪಾರಿಗೆ ಚೂರಿ ಇರಿತ

ಮಂಗಳೂರು: ಅಂಗಡಿ ವ್ಯಾಪಾರಿಯೊಬ್ಬರಿಗೆ ಚೂರಿಯಿಂದ ಇರಿದ ಘಟನೆ ಮಂಗಳೂರು ನಗರ ಹೊರವಲಯದ ಉಳ್ಳಾಲದಲ್ಲಿ ಇಂದು ನಡೆದಿದೆ. ಹರೀಶ್ ಗಾಣಿಗ (42) ಚೂರಿ ಇರಿತಕ್ಕೊಳಗಾದವರು.

ವಿಶಾಲ್ ಎಂಬಾತ ಚೂರಿಯಿಂದ ಇರಿದ ಆರೋಪಿ. ಕೆಲವು ದಿನಗಳ ಹಿಂದೆ ಹರೀಶ್ ಗಾಣಿಗ ಅವರ ಜೊತೆ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ವಿಶಾಲ್ ಗಲಾಟೆ ಮಾಡಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿ ಹರೀಶ್ ಅವರು ವಿಶಾಲ್ ವಿರುದ್ಧ ಠಾಣೆಗೆ ದೂರು ನೀಡಿದ್ದರು. ಈ ಕಾರಣದಿಂದ ಕೋಪಗೊಂಡ ವಿಶಾಲ್, ಹರೀಶ್ ಅವರ ಅಂಗಡಿ ಬಳಿ ತೆರಳಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ಚೂರಿಯಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

19/10/2021 09:52 pm

Cinque Terre

24.66 K

Cinque Terre

2

ಸಂಬಂಧಿತ ಸುದ್ದಿ