ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹಳೆಯಂಗಡಿಯಲ್ಲಿ ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆಯಂಗಡಿ ಸಂತೆಕಟ್ಟೆ ಬಳಿ ಯುವಕನೊಬ್ಬ ಇಂದು ಸಂಜೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ರಿಜ್ವಾನ್ ಅಹಮ್ಮದ್ (33) ಎಂದು ಗುರುತಿಸಲಾಗಿದೆ. ರಿಜ್ವಾನ್ ಹಳೆಯಂಗಡಿಯ ಸಂತೆಕಟ್ಟೆಯಲ್ಲಿ ಕೆಲ ವರ್ಷಗಳ ಹಿಂದೆ ಮೊಬೈಲ್ ಅಂಗಡಿ ನಡೆಸುತ್ತಿದ್ದು, ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಬಳಿಕ ಮನೆಯಲ್ಲಿ ಇದ್ದರು ಎನ್ನಲಾಗಿದೆ.

ಸೋಮವಾರ ಸಂಜೆ ಏಕಾಏಕಿ ನೆರೆಮನೆಯ ಬಾಬು ಇಂದ್ರ ಎಂಬವರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹಳೆಯಂಗಡಿಯ ಗುತ್ತಿಗೆದಾರ ಮಿರ್ಜಾ ಅಹಮ್ಮದ್ ಅವರ ಮೂವರು ಪುತ್ರರಲ್ಲಿ ಒಬ್ಬರಾದ ರಿಜ್ವಾನ್ ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದು, ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/10/2021 09:57 pm

Cinque Terre

23.15 K

Cinque Terre

3

ಸಂಬಂಧಿತ ಸುದ್ದಿ