ಮಂಗಳೂರು: ಗಾಂಧಿ ಜಯಂತಿಯಂದೇ 'ರಾಷ್ಟ್ರಪಿತ'ನ ಫೋಟೋ ವನ್ನು ಎಡಿಟ್ ಮಾಡಿ ಟ್ರೋಲ್ ಮಾಡಿರುವ ವೀಡಿಯೋವನ್ನು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡು ವಿಕೃತಿ ಮೆರೆದ ಆರೋಪಿಯ ಮೇಲೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಂಧೀಜಿಯವರು ತುಳು ಹಾಡೊಂದಕ್ಕೆ ಹೆಣ್ಣಿನೊಂದಿಗೆ ಕುಣಿಯುವ ರೀತಿ ಟ್ರೋಲ್ ಮಾಡಲಾಗಿದೆ. ಈ ವೀಡಿಯೋವನ್ನು ನಗರದ ಕೊಣಾಜೆ ಸಮೀಪದ ಹರೇಕಳ ಗ್ರಾಮದ ಪ್ರಜ್ವಲ್ ಎಂಬ ಯುವಕ ತನ್ನ ವಾಟ್ಸ್ಆ್ಯಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾನೆ. ಅಲ್ಲದೆ ವೀಡಿಯೋದಲ್ಲಿ ಬಡ್ಡೇ ಬಾಯ್ ಎಂದು ಇಂಗ್ಲಿಷ್ ನಲ್ಲಿ ಬರೆದು ವಿಕೃತಿ ಮೆರೆದಿದ್ದಾನೆ ಎಂದು ಡಿವೈಎಫ್ ಐ ಸಂಘಟನೆ ದೂರಿನಲ್ಲಿ ಆರೋಪಿಸಿದೆ.
ಗಾಂಧಿ ಜಯಂತಿಯಂದೇ 'ರಾಷ್ಟ್ರಪಿತ'ನಿಗೆ ಅವಮಾನವಾಗುವಂತೆ ಈ ಎಡಿಟೆಡ್ ವೀಡಿಯೋವನ್ನು ಟ್ರೋಲ್ ಮಾಡಲಾಗಿದೆ. ಗಾಂಧಿ ಜಯಂತಿಯಂದೇ ರಾಷ್ಟ್ರಪಿತನನ್ನು ಅವಮಾನಿಸಿರುವ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭ ಡಿವೈಎಫ್ಐ ಆಗ್ರಹಿಸಿದೆ. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಡಿವೈಎಫ್ ಐ ನಿಯೋಗ ಎಚ್ಚರಿಸಿದೆ.
Kshetra Samachara
02/10/2021 09:52 pm