ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬಾಲಕಿಯನ್ನ ಅಪಹರಿಸಿ, ರೇಪ್- ಅಪರಾಧಿಗೆ 12 ವರ್ಷಗಳ ಜೈಲು ಶಿಕ್ಷೆ

ಬಂಟ್ವಾಳ: ಶಾಲೆಗೆ ಹೋಗಿದ್ದ 14 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಮಂಗಳೂರು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ 12 ವರ್ಷಗಳ ಜೈಲು ಶಿಕ್ಷೆ ಹಾಗೂ 85 ಸಾವಿರ ದಂಡವನ್ನು ವಿಧಿಸಿ ಆದೇಶಿದೆ. ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಜೈಲು ಶಿಕ್ಷೆಯನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಟ್ಲ ಸಮೀಪದ ನಿವಾಸಿ ಬಾಲಕೃಷ್ಣ (25) ಶಿಕ್ಷೆಗೆ ಗುರಿಯಾದ ಅಪರಾಧಿ. ಸರ್ಕಾರಿ ಪರವಾಗಿ ವಕೀಲ ವೆಂಕಟ್ರಮಣ ಸ್ವಾಮಿ ವಾದಿಸಿದ್ದರು.

ವಿಟ್ಲ ಸಮೀಪದ ನಿವಾಸಿ 14 ವರ್ಷದ ಅಪ್ರಾಪ್ತ ಬಾಲಕಿ 2019ರ ಜುಲೈ 25ರಂದು ಶಾಲೆಗೆ ಹೋದವಳು ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ವಿಟ್ಲ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಕ್ಸೋ ಹಾಗೂ ಅಪಹರಣ ಪ್ರಕರಣ ದಾಖಲಾಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು. ಈ ಹಿಂದಿನ ಪೊಲೀಸ್ ಅಧಿಕಾರಿ ಟಿ. ಡಿ. ನಾಗಾರಾಜ್ ಶಿವಮೊಗ್ಗ ನೇತೃತ್ವದ ತಂಡವು ಬಾಲಕೃಷ್ಣ ಕೃತ್ಯವನ್ನು ಬಯಲು ಮಾಡಿದ್ದರು.

Edited By : Vijay Kumar
Kshetra Samachara

Kshetra Samachara

27/09/2021 07:54 pm

Cinque Terre

15.91 K

Cinque Terre

2

ಸಂಬಂಧಿತ ಸುದ್ದಿ