ಕಾರ್ಕಳ: ಭುವನೇಂದ್ರ ಕಾಲೇಜಿನ ನಿವೃತ್ತ ಉಪನ್ಯಾಸಕ, ತೆಳ್ಳಾರು ನಿವಾಸಿ ಟಿ. ಜಯರಂಗ ಭಟ್ (74) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರು ಪತ್ನಿ, ಪುತ್ರರಾದ ಡಾ. ಪ್ರಣವ್ ಹಾಗೂ ಡಾ. ವಿವೇಕ್ ಅವರನ್ನು ಅಗಲಿದ್ದಾರೆ. ಅಂದಹಾಗೆ ,ಈ ತಿಂಗಳಲ್ಲಿ ಮೂವರು ಶಿಕ್ಷಕರು ಆತ್ಮಹತ್ಯೆಗೆ ಶರಣಾಗಿಗಿರುವುದು ಗಮನಾರ್ಹ ಸಂಗತಿ.ಸೆ. 12ರಂದು ಉಪನ್ಯಾಸಕ ರವಳನಾಥ ಶರ್ಮಾ(32) , ಸೆ. 20ರಂದು ಎಸ್‌ವಿಟಿ ಉಪನ್ಯಾಸಕಿ ಮಮತಾ ಶೆಟ್ಟಿ (42) ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ತೆಲ್ಲಾರು ರಸ್ತೆಯ 14 ನೇ ಅಡ್ಡ ರಸ್ತೆಯ ಭಾಗೀರತಿ ನಿವಾಸದ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಜಯರಂಗ ಭಟ್ ಅವರು ಭುವನೆಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಕಾರ್ಕಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
Kshetra Samachara
23/09/2021 06:25 pm