ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ವಿಶಾಲ ಗಾಣಿಗ ಮರ್ಡರ್ ಕೇಸ್ : ಪೊಲೀಸ್ ತಂಡಕ್ಕೆ ನಗದು ಪುರಸ್ಕಾರ ಹಸ್ತಾಂತರ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ವರದಿಯಾದ ವಿಶಾಲ ಗಾಣಿಗ ಕೊಲೆ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು. ಜುಲೈ 12 ರಂದು ವಿಶಾಲ ಗಾಣಿಗರನ್ನು ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ ನ ಅವರ ವಾಸದ ಫ್ಲ್ಯಾಟ್‌ನಲ್ಲಿಯೇ ಸುಫಾರಿ ಕಿಲ್ಲರುಗಳು ಹತ್ಯೆ ಮಾಡಿದ್ದರು.

ಪ್ರಕರಣದ ಆರೋಪಿಗಳು ತುಂಬ ಚಾಕಚತ್ಯೆಯಿಂದ ಕೊಲೆ ಮಾಡಿದ್ದರಿಂದ ಪ್ರಕರಣವನ್ನು ಭೇದಿಸುವುದು ಕ್ಲಿಷ್ಟಕರವಾಗಿತ್ತು. ಘಟನೆ ಸಾರ್ವಜನಿಕರ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಉಡುಪಿ ಜಿಲ್ಲಾ ಎಸ್.ಪಿ ವಿಷ್ಣುವರ್ಧನ್ ಪ್ರಕರಣದ ತನಿಖೆಗೆ ನಾಲ್ಕು ತಂಡ ರಚಿಸಿದ್ದರು. ತನಿಖಾ ತಂಡದ ಸದಸ್ಯರು ಉತ್ತರ ಪ್ರದೇಶದ ಗೋರಕಪುರದಲ್ಲಿ ಸ್ವಾಮಿನಾಥನ್ ನಿಶಾದ್ ನನ್ನು ಬಂಧಿಸಿದ ನಂತರ, ವಿಶಾಲ ಗಾಣಿಗರವರ ಪತಿ ರಾಮಕೃಷ್ಣ ಗಾಣಿಗನೇ ಈ ಕೊಲೆ ಮಾಡಲು ಸುಪಾರಿ ನೀಡಿದ್ದರೆಂದು ತಿಳಿದು ಬಂದಿತ್ತು.

ಈ ಪ್ರಕರಣವನ್ನು ಭೇದಿಸಿದ ಅಧಿಕಾರಿ ಸಿಬ್ಬಂದಿಗಳ ತಂಡಕ್ಕೆ ಕರ್ನಾಟಕ ರಾಜ್ಯ ಡಿ.ಜಿ & ಐ.ಜಿ.ಪಿ ಪ್ರವೀಣ್ ಸೂದ್ 50 ಸಾವಿರ ನಗದು ಪುರಸ್ಕಾರ ಘೋಷಿಸಿದ್ದರು. ಪಶ್ಚಿಮ ವಲಯದ ಐ.ಜಿ.ಪಿ ದೇವಜ್ಯೋತಿ ರೇ ಅವರಿಂದು ತಂಡದ ಸದಸ್ಯರಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.

ಎಎಸ್ಪಿ ಕುಮಾರ ಚಂದ್ರ, ಡಿ.ವೈ.ಎಸ್ಪಿ ಸುಧಾಕರ ನಾಯಕ್, ಅನಂತ ಪದ್ಮನಾಭ ಸಿ.ಪಿ.ಐ ಬ್ರಹ್ಮಾವರ, ಮಂಜುನಾಥ ಗೌಡ, ಪಿ.ಐ ಮಣಿಪಾಲ, ಶರಣ್ ಗೌಡ, ಸಿ.ಪಿ.ಐ ಮಲ್ಪೆ, ಸಂಪತ್ ಕುಮಾರ್ ಸಿ.ಪಿ.ಐ ಕಾರ್ಕಳ, ಪಿ.ಎಸ್.ಐ ಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್, ರಾಘವೇಂದ್ರ, ಸಿ.ಡಿ.ಅರ್ ವಿಭಾಗದ ಸಿಬ್ಬಂದಿಯವರಾದ ಶಿವಾನಂದ, ದಿನೇಶ್, ನಿತಿನ್ ರವರನ್ನು ಅಭಿನಂದಿಸಲಾಯ್ತು.

Edited By : PublicNext Desk
Kshetra Samachara

Kshetra Samachara

23/09/2021 04:20 pm

Cinque Terre

10.26 K

Cinque Terre

0

ಸಂಬಂಧಿತ ಸುದ್ದಿ