ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಬಳಿಯ ಪರಿಶಿಷ್ಟ ಜಾತಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಬೆಳ್ತಂಗಡಿ ಕಳಿಂಜ ನಿವಾಸಿ ಆರೋಪಿ ಉಮೇಶ್ (35) ಎಂಬಾತನಿಗೆ ಹತ್ತು ವರ್ಷಗಳ ಕಠಿಣ ಸಜೆ ವಿಧಿಸಿದೆ.
ಆರೋಪಿ ಉಮೇಶ್ ಎಂಬಾತನಿಗೆ ಮದುವೆಯಾಗಿ ಒಂದು ಮಗು ವಿದ್ದರೂ , ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ 2014ರಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದು ಗರ್ಭವತಿಯಾದ ಬಳಿಕ ಆರೋಪಿ ಮದುವೆಯಾಗಲು ನಿರಾಕರಿಸಿದ್ದು ,2016ರಲ್ಲಿ ಯುವತಿ ನೀಡಿದ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮುಲ್ಕಿ ಪೊಲೀಸ್ ಠಾಣೆಯ ಅಂದಿನ ಪೋಲಿಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಪ್ರಕರಣ ದಾಖಲಿಸಿ ತನಿಖೆಯನ್ನು ಅಂದಿನ ಎಸಿಪಿ ಮದನ್ ಗಾಂವ್ಕರ್ ರವರು ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಆರೋಪಿಯ ಡಿಎನ್ಎ ಟೆಸ್ಟ್ ವರದಿ ಬಳಿಕ ಅತ್ಯಾಚಾರವೆಸಗಿದ ಪ್ರಕರಣ ದೃಢಪಟ್ಟಿದ್ದು ನ್ಯಾಯಾಲಯಕ್ಕೆ ಹಾಜರಾದ ಆರೋಪಿ ಉಮೇಶ್ ನಿಗೆ ನ್ಯಾಯಾಲಯ 10 ವರ್ಷಗಳ ಕಠಿಣ ಸಜೆ ವಿಧಿಸಿದೆ. ಸರಕಾರಿ ಅಭಿಯೋಜಕರಾದ ಜ್ಯೋತಿ ರವರು ಸರಕಾರದ ಪರ ವಾದಿಸಿದ್ದರು.
Kshetra Samachara
22/09/2021 11:57 am