ಕಡಬ: ತಾಲೂಕಿನ ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯದಲ್ಲಿದ್ದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಜನ್ (16) ನಾಪತ್ತೆಯಾಗಿದ್ದು, ಅಪಹರಣ ಶಂಕೆ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶ್ರೀ ರಾಮಕುಂಜೆಶ್ವರ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ.ಎಮ್ ಸೆಪ್ಟೆಂಬರ್ 21ರಂದು ಬೆಳಿಗ್ಗೆ 9:00 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದ. ಆದರೆ ಮಧ್ಯಾಹ್ನ ಇತರ ಕಾಲೇಜು ವಿದ್ಯಾರ್ಥಿಗಳು ಊಟಕ್ಕೆ ವಸತಿ ನಿಲಯಕ್ಕೆ ಬಂದ ಸಮಯದಲ್ಲಿ ಅಂಜನ್ ಕಾಲೇಜಿಗೆ ಹೋಗದೇ ಇರುವ ವಿಚಾರ ವಿದ್ಯಾರ್ಥಿಗಳಿಂದ ತಿಳಿದು ಬಂದಿದ್ದು, ಈ ವಿಚಾರದ ಬಗ್ಗೆ ಕಾಲೇಜಿನ ಪ್ರಾಂಶುಪಾಲರಲ್ಲಿ ವಿಚಾರಿಸಿದಾಗ ಕಾಲೇಜಿಗೆ ಬಾರದೇ ಇರುವ ವಿಚಾರವನ್ನು ಪ್ರಾಂಶುಪಾಲರು ಮ್ಯಾನೇಜರ್ ಅವರಿಗೆ ತಿಳಿಸಿದ್ದಾರೆ.
ಅಂಜನ್ ಅವರ ಪೋಷಕರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆದರೆ ಅಂಜನ್ ಮನೆಗೂ ತಲುಪಿಲ್ಲ ಎಂಬ ಮಾಹಿತಿ ಸಿಗುತ್ತಿದ್ದಂತೆ ಹಾಸ್ಟೆಲ್ ಸಿಬ್ಬಂದಿ ಕಡಬ ಠಾಣೆಗೆ ದೂರು ನೀಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
Kshetra Samachara
22/09/2021 08:07 am