ಕಾರ್ಕಳ: ಶಿರ್ಲಾಲುವಿನಲ್ಲಿ ಅಕ್ರಮ ಗೋಸಾಗಾಟ ಮಾಡಿದವರನ್ನು ಪೊಲೀಸರು ಇನ್ನೂ ಬಂಧಿಸದೇ ಇರುವುದಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಜೆಕಾರು ಠಾಣೆ ಮುಂದೆ ಅಹೋರಾತ್ರಿ ಜಾಗರಣೆಗೆ ಮುಂದಾಗಿದ್ದಾರೆ.ಠಾಣೆಯ ಮುಂದೆ ಇನ್ನೂರಕ್ಕೂ ಅಧಿಕ ಕಾರ್ಯಕರ್ತರು ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.
ಎರಡು ದಿನದ ಹಿಂದೆ ಜಾಗರಣ ಕಾರ್ಯಕರ್ತರು ಗೋ ಕಳ್ಳರ ಕಾರನ್ನು ಹಿಡಿದು ಕೊಟ್ಟಿದ್ದರು.ಈ ವೇಳೆ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ ಮಾಡುತ್ತಿದ್ದವರು ಪರಾರಿಯಾಗಿದ್ದರು. ಘಟನೆ ನಡೆದು ಎರಡು ದಿನ ಕಳೆದರೂ ಗೋಕಳ್ಳರನ್ನು ಬಂಧಿಸದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆಯ ಮುಂದೆ ಸತ್ಯಾಗ್ರಹ ಕುಳಿತಿದ್ದಾರೆ. ಸದ್ಯ ಪೊಲೀಸರ ಮನವೊಲಿಕೆಗೂ ಬಗ್ಗದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸತ್ಯಾಗ್ರಹ ಮುಂದುವರೆಸಿದ್ದಾರೆ.
Kshetra Samachara
21/09/2021 09:03 pm