ಸುರತ್ಕಲ್: ಸುರತ್ಕಲ್ ಸಮೀಪದ ಜೋಕಟ್ಟೆ ಮತ್ತು ಮಳವೂರು ನಿಂದ ಮಂಗಳೂರು ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ಕೆಂಜಾರು ಪಡ್ಪು ರಸ್ತೆ ಸಂಚಾರ ದುಸ್ತರವಾಗಿದೆ
ಕಳೆದ ಸರಿ ಸುಮಾರು 10 ವರ್ಷಗಳಿಂದ ಅಕ್ರಮ ಮರಳುಗಾರಿಕೆ ದಂಧೆಯನ್ನು ವಿರೋಧಿಸುತ್ತಾ ಬಂದ ಕೆಂಜಾರುಗ್ರಾಮದ 3ನೇ ವಿಭಾಗದ ಕೆಂಜಾರು ಪಡ್ಪು ನಾಗರಿಕರು ರಸ್ತೆ ಅವ್ಯವಸ್ಥೆ ಯಿಂದ ತೀವ್ರ ಕಂಗಾಲಾಗಿದ್ದಾರೆ
ಮಳವೂರು ಗ್ರಾಮ ಪಂಚಾಯತ್, ಪ್ರಸ್ತುತ ಬಜ್ಜೆ ಪಟ್ಟಣ ಪಂಚಾಯತ್ ಗೆ ಸೇರಿದ ಈ ರಸ್ತೆಯ ಬದಿ ಫಲ್ಗುಣಿ ನದಿಯಲ್ಲಿ ನಡೆಸುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಧ್ವನಿ ಕೇಳಿಬರುತ್ತಿದ್ದರೂ ಮತ್ತೆ ಮರಳುಗಾರಿಕೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿರುವುದು ಹಾಸ್ಯಾಸ್ಪದ ಎಂದು ಸ್ಥಳೀಯ ನಾಗರಿಕರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಇನ್ನೂ ದೇಶವನ್ನೆ ಮಾರಾಟಕ್ಕೆ ಇಟ್ಟ ಜನಪ್ರತಿನಿಧಿಗಳು ಇದನ್ನು ಬಿಡುವರೆ ಖಂಡಿತಾ ಬಿಡಲ್ಲ. ಹಾಗಂತ ಜಿಲ್ಲಾಡಳಿತ, ಸ್ಥಳೀಯಾಡಳಿತ ಗ್ರಾಮಸ್ಥರ ಗೋಳುಕೇಳದಿರುವುದು ವಿಪರ್ಯಾಸ ಎಂಬ ಸ್ಥಳೀಯ ನಾಗರಿಕರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜಿಲ್ಲಾಡಳಿತ ಮೌನವಾಗಿದೆ.
Kshetra Samachara
11/09/2021 09:50 pm