ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕ್ಷುಲ್ಲಕ ಕಾರಣದಿಂದ ನಡೆದ ಗಲಾಟೆ ಚೂರಿ ಇರಿತದಿಂದ ಅಂತ್ಯ

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ವ್ಯಕ್ತಿಯೋರ್ವರಿಗೆ ಚೂರಿ ಇರಿತದಿಂದ ಅಂತ್ಯಗೊಂಡ ಘಟನೆ ನಗರದ ಹೊರವಲಯದ ಎದುರುಪದವಿನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬಾಗಲಕೋಟೆ ಮೂಲದ ನಿಂಗಣ್ಣ ಎಂಬವರು ಚೂರಿ ಇರಿತಗೊಂಡವರು. ಮದ್ಯಸೇವನೆ ಮಾಡಿ ನಿಂಗಣ್ಣ ಹಾಗೂ ಎದುರುಪದವು ನಿವಾಸಿ ದಿವಾಕರ್ ನಡುವೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು ಗಲಾಟೆ ನಡೆದಿದೆ. ಈ ಸಂದರ್ಭ ದಿವಾಕರ ಮತ್ತು ಆತನ ತಂಡದವರು ನಿಂಗಣ್ಣನಿಗೆ ಚೂರಿಯಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಾಗಳುವನ್ನು ತಕ್ಷಣ ನಗರದ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕಾವೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

03/09/2021 09:03 am

Cinque Terre

18.88 K

Cinque Terre

0

ಸಂಬಂಧಿತ ಸುದ್ದಿ