ಉಡುಪಿ: ಉಡುಪಿಯ ಸಂತೆಕಟ್ಟೆ ಬಳಿ ಯುವಕನೊಬ್ಬ ಯುವತಿಗೆ ಚಾಕುವಿನಿಂದ ಇರಿದು ,ತಾನೂ ಇರಿದುಕೊಂಡ ಘಟನೆ ನಡೆದಿದೆ.ಸೌಮ್ಯಶ್ರೀ ಭಂಡಾರಿ ಎಂಬ ಯುವತಿಯ ಸ್ಕೂಟಿಯನ್ನು ತಡೆದು ನಿಲ್ಲಿಸಿ ,ಯುವಕ ಆಕೆಯ ಕುತ್ತಿಗೆಗೆ ಚಾಕುವಿನಲ್ಲಿ ಇರಿದಿದ್ದಾನೆ!
ಆರೋಪಿ ಯುವಕ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಯುವತಿ ಕುಸಿಯುತ್ತಿದ್ದಂತೆ ತಾನೂ ಕೂಡ ಚಾಕುವಿನಿಂದ ಇರಿದುಕೊಂಡಿದ್ದಾನೆ. ವಾರದ ಹಿಂದೆ ಯುವತಿಗೆ ನಿಶ್ಚಿತಾರ್ಥ ಆಗಿತ್ತು ಎನ್ನಲಾಗಿದೆ.ಈಗ ಯುವಕ ಮತ್ತು ಯುವತಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
Kshetra Samachara
30/08/2021 06:15 pm