ಬೈಕಂಪಾಡಿ: ಸುರತ್ಕಲ್‌ನ ಬೈಕಂಪಾಡಿ ಸಮೀಪದ ಜೋಕಟ್ಟೆ ಬಳಿ ಬೈಕ್ ಕಳವು ನಡೆಸಿದ್ದ ಆರೋಪಿಗಳನ್ನು ಸುರತ್ಕಲ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಸುರತ್ಕಲ್ ಅಗರಮೇಲು ರಸ್ತೆ ನಿವಾಸಿ ಮಹಮ್ಮದ್ ಇಶಾಕ್ (30) ಹಾಗೂ ಚೊಕ್ಕಬೆಟ್ಟು ನಿವಾಸಿ ಶಮೀರ್ (30) ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 70 ಸಾವಿರ ರೂ. ಮೌಲ್ಯದ ಬೈಕ್ ಹಾಗೂ ಕಾನದ ಖಾಸಗಿ ಆಸ್ಪತ್ರೆಯ ವೈದ್ಯರ ಕೋಣೆಯಿಂದ ಇತ್ತೀಚೆಗೆ ಕಳವು ನಡೆಸಿದ್ದ 6500 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Kshetra Samachara
27/08/2021 07:46 am