ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟಪಾಡಿ: ದೇವರಿಗೆ ಹಚ್ಚಿಟ್ಟ ದೀಪದ ತಗುಲಿ ಸುಟ್ಟು ಕರಕಲಾದ ಮನೆಯ ಮೇಲ್ಛಾವಣಿ- ತಪ್ಪಿದ ಅನಾಹುತ

ಕಟಪಾಡಿ: ಮಟ್ಟು ಕಾಲೋನಿ ಸಮೀಪದ ಶ್ರೀ ಬ್ರಹ್ಮಮುಗ್ಗೇರ್ಕಳ ದೈವಸ್ಥಾನದ ಬಳಿ ಗುಲಾಬಿ ಜಯ ಬಂಗೇರ ಎಂಬವರ ಗುಡಿಸಲೊಂದಕ್ಕೆ ನಿನ್ನೆ (ಮಂಗಳವಾರ) ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ದೇವರಿಗೆ ಹಚ್ಚಿಟ್ಟ ದೀಪದ ಮೂಲಕ ಆಕಸ್ಮಿಕವಾಗಿ ಬೆಂಕಿಯು ಮನೆಯೊಳಗೆ ವ್ಯಾಪಿಸಿದ್ದಾಗಿ ಮನೆಮಂದಿ ಪರಿತಪಿಸುತ್ತಿದ್ದು, ಗುಡಿಸಲಿನ ಮಾಡಿಗೆ ಹೊದಿಸಿದ್ದ ಟರ್ಪಲ್ ಸುಟ್ಟು ಕರಕಲಾಗಿರುತ್ತದೆ. ಮನೆಯೊಳಗಿದ್ದ ಪೀಠೋಪಕರಣ, ಔಷಧಿ, ಧವಸ ಧಾನ್ಯ, ಮೀನುಗಾರಿಕೆಗೆ ಉಪಯೋಗಿಸುವ ಬಲೆ ಸಹಿತ ಗೃಹೋಪಯೋಗಿ ಸೊತ್ತುಗಳು ಸುಟ್ಟು ಕರಕಲಾಗಿರುತ್ತದೆ. ಸುಮಾರು 50 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ.

ಬೆಂಕಿ ಹತ್ತಿ ಉರಿಯುವ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಂಭಾವ್ಯ ಪ್ರಾಣಾಪಾಯದಂತಹ ಹೆಚ್ಚಿನ ದುರಂತವು ತಪ್ಪಿತ್ತು ಎಂದು ಸ್ಥಳೀಯರು ನಿಟ್ಟುಸಿರು ಬಿಡುತ್ತಿರುವುದು ಕಂಡು ಬಂದಿತ್ತು. ಬಡಕುಟುಂಬವು ಮನೆಯ ನಿತ್ಯೋಪಯೋಗಿ ಧವಸ ಧಾನ್ಯ ಸಹಿತ ಬೀಡಿ ಕಟ್ಟುವ ಎಲೆ, ಹೊಗೆಸೊಪ್ಪು, ದಿನಗೂಲಿ ನೌಕರಿಯಿಂದ ದುಡಿದು ತಂದ ತಿಂಡಿ ತಿನಿಸು ಸಹಿತ ಆಹಾರ ಸಾಮಗ್ರಿಯನ್ನೂ ಕಳೆದುಕೊಂಡ ತಮ್ಮ ಅಸಹಾಯಕತೆ, ಸಂಕಟವನ್ನು ನೆನೆದು ಕಣ್ಣೀರಿಡುತ್ತಿರುವುದು ಕಂಡು ಬಂದಿದ್ದು, ನೆರೆ ಹೊರೆಯವರು ಸುಟ್ಟು ಕರಕಲಾದ ಸಾಮಗ್ರಿಗಳ ಸಹಿತ ಅಳಿದುಳಿದ ಪರಿಕರಗಳನ್ನು, ಬಟ್ಟೆ ಬರೆಗಳನ್ನು ತೆರವುಗೊಳಿಸುವಲ್ಲಿ ಕೈ ಜೋಡಿಸುತ್ತಿದ್ದರು.

Edited By : Vijay Kumar
Kshetra Samachara

Kshetra Samachara

25/08/2021 11:47 am

Cinque Terre

18.03 K

Cinque Terre

0

ಸಂಬಂಧಿತ ಸುದ್ದಿ