ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹೊಳೆಗೆ ಸ್ನಾನಕ್ಕೆ ಇಳಿದ ಕೃಷಿ ಕಾರ್ಮಿಕರಿಬ್ಬರು ನೀರುಪಾಲು

ಕುಂದಾಪುರ: ಹೊಳೆಗೆ ಸ್ನಾನಕ್ಕೆಂದು ಹೋದ ಕೃಷಿ ಕಾರ್ಮಿಕರಿಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಉಡುಪಿ ಜಿಲ್ಲೆಯ‌ ಬೈಂದೂರಿನ ಆರ್ಡಿ ಗ್ರಾಮದಲ್ಲಿ ನಡೆದಿದೆ.‌

ಅಲ್ಬಾಡಿ ಗ್ರಾಮದ ನಿವಾಸಿಗಳಾದ ಮೋಹನ್ ನಾಯ್ಕ್ (22) ಹಾಗೂ ಸುರೇಶ್ (19) ಮೃತ ದುರ್ದೈವಿ. ನಿನ್ನೆ ಸಂಜೆ ಇವರಿಬ್ಬರು ಮನೆಯ ಸಮೀಪದ ಹೊಳೆಗೆ ಸ್ನಾನಕ್ಕೆಂದು ನೀರಿಗೆ ಇಳಿದಾಗ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗಿ ಸಾವನ್ನಪ್ಪಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಅನುಮಾನಗೊಂಡು ನದಿಯಲ್ಲಿ ಹುಡುಕಾಟ ನಡೆಸಿದಾಗ ತಡರಾತ್ರಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಶಂಕರನಾರಾಯಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

24/08/2021 11:45 am

Cinque Terre

16.97 K

Cinque Terre

0

ಸಂಬಂಧಿತ ಸುದ್ದಿ